ಮಾಹಿತಿ ತಂತ್ರಜ್ಞಾನ

ಮೊಬೈಲ್ ಆ್ಯಪ್ ಮೂಲಕ ಹಣಕ್ಕಾಗಿ ಪ್ರಣಯದ ನೇರ ಪ್ರಸಾರ..! ದಂಪತಿ ಸೆರೆ 

Views: 188

ಕನ್ನಡ ಕರಾವಳಿ ಸುದ್ದಿ:  ಹಣ ಮಾಡುವ ಉದ್ದೇಶದಿಂದ ಲೈಂಗಿಕ ಕ್ರಿಯೆಯನ್ನು ಮೊಬೈಲ್ ಆ್ಯಪ್ ಮೂಲಕ ನೇರ ಪ್ರಸಾರ  ಮಾಡುತ್ತಿದ್ದ ದಂಪತಿಯನ್ನು ಬಂಧಿಸಿದ ಘಟನೆ ನಡೆದಿದೆ.

ಆರ್ಥಿಕ ಸಂಕಷ್ಟದಲ್ಲಿದ್ದೇವೆ. ನಮ್ಮ ಇಬ್ಬರು ಮಕ್ಕಳ ಕಾಲೇಜು ಶುಲ್ಕ ಭರಿಸಲು ಮೊಬೈಲ್ ಆ್ಯಪ್ ಮೂಲಕ ಲೈಂಗಿಕ ಚಟುವಟಿಕೆಯನ್ನು ನೇರ ಪ್ರಸಾರ ಮಾಡಿದೆವು, ಎಂದು ದಂಪತಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಯುವ ಜನರನ್ನುಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ‘ಸ್ವೀಟ್ ತೆಲುಗು ಕಪಲ್’ ಹೆಸರಿನಲ್ಲಿ ಅಕೌಂಟ್‌ ತೆರೆದಿದ್ದ ದಂಪತಿ ಆನ್ ಲೈನ್‌ನಲ್ಲಿ ಹಣ ಪಡೆದುಕೊಂಡು ವಿಡಿಯೊ ಲಿಂಕ್ ಹಂಚಿಕೊಂಡಿದ್ದರು.

ವೀಕ್ಷಣೆಗೆ 500, 2 ಸಾವಿರ ರೂ. ಶುಲ್ಕ

ಲೈವ್‌ ವೀಕ್ಷಣೆಗೆ 2ಸಾವಿರ ರೂ. ಹಾಗೂ ರೆಕಾರ್ಡೆಡ್ ವಿಡಿಯೊಗೆ 500 ರೂ. ಶುಲ್ಕ ವಿಧಿಸುತ್ತಿದ್ದರು ಎನ್ನಲಾಗಿದೆ. ಲೈಂಗಿಕ ಚಟುವಟಿಕೆಯ ಲೈವ್‌ ಸ್ಟ್ರೀಮ್ ಸಮಯದಲ್ಲಿ 41 ವರ್ಷದ ಕಾರು ಚಾಲಕ ಪತಿ ಹಾಗೂ 37 ವರ್ಷದ ಪತ್ನಿ ತಮ್ಮ ಗುರುತು ಮರೆಮಾಚಲು ಮಾಸ್ಕ್ ಧರಿಸುತ್ತಿದ್ದರು. ದಂಪತಿಯ ಹಿರಿಯ ಮಗಳು ಬಿ. ಟೆಕ್ ಓದುತ್ತಿದ್ದು, ಎರಡನೇ ಮಗಳು ಇತ್ತೀಚೆಗೆ 10ನೇ ತರಗತಿ ಉತ್ತೀರ್ಣಳಾಗಿದ್ದಾಳೆ.

ಹೈದರಾಬಾದ್‌ನ ಮಲ್ಲಿಕಾರ್ಜುನ ನಗರದ ಅಂಬರ್‌ಪೇಟೆಯಲ್ಲಿದ್ದ ಮನೆಯಲ್ಲಿದ್ದ ದಂಪತಿ ಕಳೆದ ನಾಲ್ಕು ತಿಂಗಳಿಂದ ಇನ್‌ಸ್ಟಾಗ್ರಾಂನಲ್ಲಿ ತಮ್ಮ ನಗ್ನ-ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತೆಲಂಗಾಣದ- ಹೈದರಾಬಾದ್ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

Related Articles

Back to top button