ಆರೋಗ್ಯ

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ವದಂತಿ: ಕ್ರಿಸ್ಮಸ್, ನ್ಯೂ ಇಯರ್ ಸೀಸನ್‌ನಲ್ಲೇ  ವ್ಯಾಪಾರಿಗಳಿಗೆ ಹೊಡೆತ

Views: 30

ಕನ್ನಡ ಕರಾವಳಿ ಸುದ್ದಿ: ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತೆ ಅನ್ನೋ ವದಂತಿಯಿಂದಾಗಿ ಮೊಟ್ಟೆ ಬಳಸಿ ತಯಾರಿಸುವ ಫುಡ್ ಐಟಮ್ಸ್ ಮಾರಾಟದಲ್ಲಿ ಶೇಕಡ 10-15 ರಷ್ಟು ಕುಸಿತವಾಗಿದೆ.

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂಬ ವದಂತಿ ಹಿನ್ನೆಲೆ ಮೊಟ್ಟೆ ಬಳಸಿ ಮಾಡುವ ವಸ್ತುಗಳ ಮಾರಾಟದಲ್ಲಿ ಕುಸಿತವಾಗಿದೆ. ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಸೀಸನ್‌ನಲ್ಲೇ ಈ ರೀತಿ ಆಗಿರುವುದು ವ್ಯಾಪಾರಿಗಳಿಗೆ ದೊಡ್ಡ ಹೊಡೆತ ನೀಡಿದೆ.

ಎಗ್ಗೋಸ್ ಮೊಟ್ಟೆಗಳು ಕ್ಯಾನ್ಸರ್ ಕಾರಕ ಎಂಬ ವರದಿಗಳ ಹಿನ್ನಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಆಲರ್ಟ್ ಆಗಿದೆ. ಎಗ್ಗೋಸ್ ಕಂಪನಿಯ ಮೊಟ್ಟೆ ಸ್ಯಾಂಪಲ್ಸ್ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು FSSAIಗೆ ಸೂಚನೆ ನೀಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಮಾದರಿಗಳ ಸಂಗ್ರಹ ಮಾಡಲಾಗುತ್ತೆ. GBA ವ್ಯಾಪ್ತಿಯ 10 ಕಡೆಗಳಲ್ಲಿ ಮೊಟ್ಟೆಗಳ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದೆ. ಇದರ ನಡುವೆ ಮೊಟ್ಟೆಗಳನ್ನ ತಿನ್ನಲು ಜನರು ಹಿಂದೇಟು ಹಾಕಿದ್ದಾರೆ. ಹೀಗಾಗಿ ವ್ಯಾಪಾರಿಗಳ ಮೇಲೆ ಹೊಡೆತ ಬಿದ್ದಿದೆ.

Related Articles

Back to top button