ಕ್ರೀಡೆ

ಮೈದಾನದಲ್ಲೇ ಮಲಗಿದ ರೋಹಿತ್ ಶರ್ಮ ಅವರಿಗೆ ಸ್ಫೂರ್ತಿ ತುಂಬಿ ಬಡಿದೆಬ್ಬಿಸುವ ಕಾಂತಾರದ ದೈವ….!

Views: 301

ಬಾರ್ಬಡೋಸ್: ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಳೆದ ಹಲವು ವರ್ಷಗಳಿಂದ  ಕಾಯುತ್ತಿದ್ದ ಐಸಿಸಿ ಟ್ರೋಫಿ ಕನಸು ಕೊನೆಗೂ ನನಸಾಗಿದೆ ಕ್ರಿಕೆಟ್ ಅಭಿಮಾನಿಗಳು ಹಂಚಿಕೊಂಡ ಸಂಭ್ರಮ ಹೀಗಿದೆ..

ಶನಿವಾರ ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ 17 ವರ್ಷಗಳ ಬಳಿಕ ಮತ್ತೊಂದು ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿತು. ಈ ಸಾಧನೆಗೆ ತಂಡದ ನಾಯಕ ರೋಹಿತ್ ಶರ್ಮಗೆ  ಕನ್ನಡದ ಕಾಂತಾರ ಸಿನಿಮಾದ ಪಂಜುರ್ಲಿ ದೈವ ಆಶೀರ್ವಾದ ಮಾಡಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್‌ ಆಗುತ್ತಿವೆ.

ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವಾವೇಷದ ದೈವನರ್ತನ ಪಾತ್ರವು ಭಾರಿ ಗಮನ ಸೆಳೆದಿತ್ತು. ಕಳೆದ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಭ್ರಮದಲ್ಲಿ ಮೈದಾನದಲ್ಲೇ ಮಲಗಿದ ನಾಯಕ ರೋಹಿತ್ ಶರ್ಮ ಅವರಿಗೆ ಆಶೀರ್ವಾದ ಮಾಡುವ… ಸ್ಫೂರ್ತಿ ತುಂಬಿ… ಬಡಿದೆಬ್ಬಿಸುವ..ಹೋ.. ಎನ್ನುವ ವಿಡಿಯೋ ಮತ್ತು  ಫೋಟೊಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. “ಕಾಂತಾರದ ಪಂಜುರ್ಲಿ ದೈವವು ಭಾರತ ತಂಡದ ಗೆಲುವಿಗೆ ಮತ್ತು ರೋಹಿತ್ ಅವರ ಕನಸಿನ ವಿಶ್ವಕಪ್ ಗೆಲ್ಲುವಲ್ಲಿ ನೆರವಾಯಿತು” ಎಂದೆಲ್ಲ ನೆಟ್ಟಿಗರು ಬರೆದುಕೊಂಡಿದ್ದಾರೆ. ಈ ಫೋಟೊಗಳು ಹಾಗೂ ಪೋಸ್ಟ್‌ಗಳು ಭಾರಿ ವೈರಲ್‌ ಆಗುವುದರ ಜೊತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.

Related Articles

Back to top button
error: Content is protected !!