ಸಾಂಸ್ಕೃತಿಕ

ಮೇ.9 ರಂದು ಕಮಲಶಿಲೆಯಲ್ಲಿ ಚೈತ್ರಾ ಕುಂದಾಪುರ ಮದುವೆ, ಹುಡುಗ ಯಾರು?

Views: 1197

ಕನ್ನಡ ಕರಾವಳಿ ಸುದ್ದಿ: ಚೈತ್ರಾ ಕುಂದಾಪುರ ಅವರು ತಾವು 12 ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗನನ್ನು ಕೊನೆಗೂ ಮದುವೆಯಾಗಲು ಹೊರಟಿದ್ದಾರೆ. ಇದೀಗ ಆ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ಸಿಕ್ಕಿದ್ದು ಸದ್ಯ ಮದುವೆಯ ಕರೆಯೋಲೆ ಕೊಡುವಲ್ಲಿ ಚೈತ್ರಾ ಕುಂದಾಪುರ ಬಿಜಿಯಾಗಿದ್ದಾರೆ.

ಎಂಗೇಜೆಂಟ್ ಮಾಡಿಕೊಂಡೇ ಬಿಗ್ ಬಾಸ್ ಮನೆಯೊಳಗೆ ಬಂದಿದ್ದೇನೆ ಎಂದು ಹೇಳಿದ್ದ ಚೈತ್ರಾ ಕುಂದಾಪುರ ಅಲ್ಲಿಂದ ಇವರ ಮದುವೆ ಯಾವಾಗ ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಚೈತ್ರಾ ಕುಂದಾಪುರ ಕೂಡ ಮದುವೆ ಬಗ್ಗೆ ಕೇಳಿದಾಗಲೆಲ್ಲಾ ಸರಿಯಾಗಿ ಉತ್ತರಿಸಲಿಲ್ಲ.

‘ಬಿಗ್ ಬಾಸ್’ ಮನೆಯಲ್ಲಿರುವಾಗ ಚೈತ್ರಾ ಕುಂದಾಪುರ ತಮ್ಮ ಉಂಗುರ ಕಳೆದುಕೊಂಡು ಚಡಪಡಿಸಿದ್ದರು. “ಅದು ಚೈತ್ರಾ ಅವರ ಭಾವಿ ಪತಿ ಕೊಟ್ಟ ಉಂಗುರ” ಎಂದು ಸುದ್ದಿಯಾಗಿತ್ತು. ಕೊರಗಜ್ಜನ ಪವಾಡದಿಂದ ಆ ಉಂಗುರ ಮರಳಿ ಸಿಕ್ಕಿತ್ತು.

ಚೈತ್ರಾ ಪ್ರೀತಿಸಿದ . ಹುಡುಗ ಯಾರು?

ಬಿಗ್‌ಬಾಸ್ ಚೈತ್ರಾ ಕುಂದಾಪುರ 12 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನನ್ನು ಕೊನೆಗೂ ಮದುವೆಯಾಗಲಿದ್ದಾರೆ. ಇದರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದು ಇತ್ತೀಚಿಗೆ ನಡೆದ “ಮಜಾ ಟಾಕೀಸ್” ಶೋ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಎಲ್ಲರಂತೆ ನಮ್ಮದು ರೋಮ್ಯಾಂಟಿಕ್ ಆಗಿ ಪ್ರೀತಿ ಶುರು ಆಗಲಿಲ್ಲ. ಜಗಳ, ದ್ವೇಷದಿಂದಲೇ ಪ್ರೀತಿ ಶುರುವಾಗಿದ್ದು ಎಂದು ಚೈತ್ರಾ ಹೇಳಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಶ್ರೀಕಾಂತ್ ಎನ್ನುವ ಹೆಸರಿದೆ.

ಇದೇ ಬರುವ ಮೇ 9, ಶುಕ್ರವಾರದಂದು ಚೈತ್ರಾ ಕುಂದಾಪುರ ಅವರ ವಿವಾಹವು ಕಮಲಶಿಲೆ ಬ್ರಾಹ್ಮ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಬಿಗ್‌ಬಾಸ್ ಸ್ಪರ್ಧಿಗಳು ಸೇರಿದಂತೆ ಹಲವು ಗಣ್ಯ ಅತಿಥಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.

 

Related Articles

Back to top button
error: Content is protected !!