ಇತರೆ
ಮಾಲಿನಿ ಮಲ್ಯ ನಿಧನ

Views: 4
ಕೋಟ: ಡಾ. ಶಿವರಾಮ ಕಾರಂತ ಸಂಶೋಧನ ಹಾಗೂ ಅಧ್ಯಯನ ಸಂಸ್ಥೆಯ ಅಧ್ಯಕ್ಷೆ ಮಾಲಿನಿ ಮಲ್ಯ (72) ಮಾ. 28 ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.ಅವರು ಅವಿವಾಹಿತರಾಗಿದ್ದರು.ಅವರು ದೀಘ೯ ಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು.
ಕಾರಂತರ ಹಲವಾರು ಕೃತಿಗಳಿಗೆ ಅಕ್ಷರ ರೂಪವನ್ನು ನೀಡಿದ್ದರು. ಸ್ವತ ಸಾಹಿತಿಯಾಗಿದ್ದ ಅವರು ಕಾರಂತರ 30 ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದು, ಕಾರಂತ ನಿಧನದ ನಂತರ 400 ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ – ಸಾಹಿತ್ಯೇತರ ವಸ್ತುಗಳನ್ನು ಸಂರಕ್ಷಿಸಿ, ಕಾರಂತರ ಪ್ರತಿಷ್ಟಾನವನ್ನು ಸ್ಥಾಪಿಸಿದ್ದಾರೆ.






