ಇತರೆ

ಮಹಿಳೆ ತನ್ನ ಗಂಡನ ಮೊದಲ ಹೆಂಡತಿಗೆ ಒಂದೆರಡಲ್ಲ 50 ಬಾರಿ ಇರಿದ 2ನೇ ಪತ್ನಿ 

Views: 319

ಕನ್ನಡ ಕರಾವಳಿ ಸುದ್ದಿ: ಹೆಣ್ಣಿಗೆ ಹೆಣ್ಣೆ ಶತ್ರು ಅನ್ನೋ ಗಾದೆ ಮಾತಿನಂತೆ ತನ್ನ ಗಂಡನ ಮೊದಲ ಪತ್ನಿಗೆ ಎರಡನೆಯ ಪತ್ನಿ ಭೀಕರ ಹಲ್ಲೆ ಮಾಡಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ರಕ್ತಸಿಕ್ತವಾದ ಕೈಯಲ್ಲಿ ಚಾಕು ಹಿಡಿದು ನಿಂತಿರುವ ಈಕೆಯ ಹೆಸರು ಮಾನ್ಸಿ. ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವಳ ಹೆಸರು ಜಯಾ. ಇಬ್ಬರೂ ಕೂಡ ಒಬ್ಬನನ್ನೇ ಮದುವೆಯಾಗಿದ್ದಾರೆ. ಮಧ್ಯಪ್ರದೇಶದ ರೇವಾ ನಗರದ ನಿವಾಸಿಗಳು. ಆದರೆ ದೀಪಾವಳಿಯಂದು ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾನ್ಸಿ ಕೋಪಗೊಂಡು ಜಯಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಒಂದಲ್ಲ, ಎರಡಲ್ಲ ಬರೋಬ್ಬರಿ 50 ಬಾರಿ ಚಾಕುವಿನಿಂದ ಇರಿದಿದ್ದಾಳೆ.

2019ರಲ್ಲಿ ಜಯಾ ಎಂಬುವರನ್ನು ರಾಂಬಾಬು ವರ್ಮಾ ಮದುವೆಯಾಗಿದ್ದ. ಆದ್ರೆ ಜಯಾಗೆ ಅನಾರೋಗ್ಯವಿದ್ದ ಕಾರಣ 2021ರಲ್ಲಿ ರಾಂಬಾಬು 2ನೇ ಮದುವೆ ಆಗಲು ನಿರ್ಧರಿಸಿದ್ದ. ಅದರಂತೆ ಮಾನ್ಸಿ ಎಂಬುವಳನ್ನು 2ನೇ ಮದುವೆಯಾಗಿದ್ದನು. ದೀಪಾವಳಿ ಹಬ್ಬದ ದಿನ ಜಯಾ ಮತ್ತು ಮಾನ್ಸಿ ನಡುವೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಮಾನ್ಸಿಯಿಂದ ಜಯಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಂಡನ ಮೊದಲ ಪತ್ನಿ ಜಯಾಗೆ 2ನೇ ಪತ್ನಿ ಮಾನ್ಸಿ ಚಾಕುವಿನಿಂದ 50 ಬಾರಿ ಇರಿದಿದ್ದಾಳೆ. ಜಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಬಿಡದೇ ಕಾಲಿನಿಂದ ತುಳಿದು ಪದೇ ಪದೇ ಹಲ್ಲೆ ಮಾಡಿದ್ದು, ಈ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಯಾರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಜಯಾ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮತ್ತೊಂದೆಡೆ, ಮಾರಣಾಂತಿಕ ಹಲ್ಲೆ ನಡೆಸಿದ ಮಾನ್ಸಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

 

Related Articles

Back to top button
error: Content is protected !!