ಕನ್ನಡ ಕರಾವಳಿ ಸುದ್ದಿ: ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾದ 44ನೆಯ ವರ್ಷದ ಅಧ್ಯಕ್ಷರಾಗಿ ಎಂ. ಕೃಷ್ಣಯ್ಯ ಆಚಾರ್ಯ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಹುದ್ದೆಗಳಿಗೆ ಸೋಮಯ್ಯ ಬಿಲ್ಲವ ಮತ್ತು ಬಾಬು ಮಡಿವಾಳ ನಿಯುಕ್ತರಾಗಿರುವರು. ಪುಟ್ಟ ಎಂ. ಬಿಲ್ಲವ, ಶೇಷಗಿರಿ ಆಚಾರ್ಯ, ಚಂದ್ರ ಬಿಲ್ಲವ, ಎಸ್. ಜನಾರ್ದನ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿರುವರು. ಸಾಧನಾ ಸಮುದಾಯ ಭವನದಲ್ಲಿ ಏ. 5ರಂದು ನಡೆದ ಮಾಸಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.