ಇತರೆ

ಮಧುಗಿರಿ DYSP ರಾಮಚಂದ್ರಪ್ಪ ಬಂಧನ, ಏನಿದು ರಾಸಲೀಲೆ ಪ್ರಕರಣ?

Views: 475

ಕನ್ನಡ ಕರಾವಳಿ ಸುದ್ದಿ, ತುಮಕೂರು: ರಾಸಲೀಲೆ ವಿಡಿಯೋ ಪ್ರಕರಣದಲ್ಲಿ ಮಧುಗಿರಿ DYSP ರಾಮಚಂದ್ರಪ್ಪ ಅವರನ್ನ ಬಂಧಿಸಲಾಗಿದೆ. ರಾಸಲೀಲೆ ವಿಡಿಯೋ ಲೀಕ್ ಆದ ಬಳಿಕ ಈ ಪ್ರಕರಣ ಸಾಕಷ್ಟು ಸದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯಿಂದ ದೂರು ಪಡೆದು FIR ದಾಖಲಿಸಲಾಗಿದೆ.

ಮಹಿಳೆ ನೀಡಿದ ದೂರಿನ ಮೇರೆಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಸೆಕ್ಸನ್ 68, 75, 79 ಅತ್ಯಾಚಾರ ಪ್ರಕರಣ ದಾಖಲಾಗಿದ್ದು,

ಡಿವೈಎಸ್‌ಪಿ ಮೇಲೆ ಕೇಸ್ ದಾಖಲಿಸಿದ ಪೊಲೀಸರು ರಾಮಚಂದ್ರಪ್ಪ ಅವರನ್ನು ಮಧುಗಿರಿ ಪೊಲೀಸ್ ಠಾಣೆಯಲ್ಲೇ ಕೂರಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮಧುಗಿರಿ ಠಾಣೆಯ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಏನಿದು ರಾಸಲೀಲೆ ಪ್ರಕರಣ?

DYSP ರಾಮಚಂದ್ರಪ್ಪ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು ಮಹಿಳೆಯೊಬ್ಬರು ಆಗಮಿಸಿದ್ದರು. ಆಗ ತನ್ನ ಕಚೇರಿಯ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋಗಿದ್ದ ಡಿವೈಎಸ್‌ಪಿ ರಾಮಚಂದ್ರಪ್ಪ ಅವರು ರಾಸಲೀಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ತನ್ನ ಕಚೇರಿಯಲ್ಲೇ‌ ಮಹಿಳೆಯೊಂದಿಗೆ ಡಿವೈಎಸ್ಪಿ ರಾಸಲೀಲೆ ನಡೆಸಿದ್ದು, ಕಿಟಕಿ ಮೂಲಕ ವಿಡಿಯೋ ಚಿತ್ರೀಕರಣಗೊಂಡಿದ್ದು ವಿಡಿಯೋ ವೈರಲ್ ಆಗಿತ್ತು. ಮಧುಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋ ಗಂಭೀರ ಸ್ವರೂಪ ಪಡೆದಿದೆ. ಡಿವೈಎಸ್‌ಪಿಯನ್ನು ವಿಚಾರಣೆಗೆ ಕರೆ ತಂದ ಮಧುಗಿರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವ್ಯಕ್ತಿಯೊಬ್ಬರು ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ನಡೆದ ಈ ಘಟನೆ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿತ್ತು.

Related Articles

Back to top button
error: Content is protected !!