ಯುವಜನ

ಮದುವೆ ನಿರಾಕರಿಸಿದ ಪ್ರಿಯಕರ; ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ

Views: 137

ರಾಯಚೂರು: ರಾಯಚೂರಿನಲ್ಲಿ ಅಂತರ್ಜಾತಿ ವಿವಾಹಕ್ಕೆ ಯುವಕನ ಕಡೆಯವರ ಅಡ್ಡಿ ಆಗಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಸಾಂತ್ವನ ಕೇಂದ್ರದ ಹಾಸ್ಟೆಲ್‌ ಕಟ್ಟಡದಿಂದ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅನುರಾಧ (18) ಆತ್ಮಹತ್ಯೆ ಮಾಡಿಕೊಂಡವಳು.

ರಾಯಚೂರು ನಗರದ ಜಲಾಲ್ ನಗರದ ನಿವಾಸಿಯಾದ ಅನುರಾಧ, ವಿನಯ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ನಡುವೆ ಇವರಿಬ್ಬರು ಮದುವೆಯಾಗಲು ಸಹ ನಿಶ್ಚಯಿಸಿದ್ದರು. ಆದರೆ ಯುವತಿ ಕೆಳಜಾತಿಯವಳು ಎಂಬ ವಿಚಾರಕ್ಕೆ ವಿನಯ್‌ ಕುಟುಂಬಸ್ಥರು ಕ್ಯಾತೆ ತೆಗೆದಿದ್ದರು ಎನ್ನಲಾಗಿದೆ.

ಈ ವಿಚಾರ ತಿಳಿದು ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಯುವಕನ ಮನೆಯವರು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಪೊಲೀಸರು ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಇದರಿಂದ ಮನನೊಂದ ಅನುರಾಧ ಸಾಂತ್ವನ ಕೇಂದ್ರದ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಚಿಕಿತ್ಸೆಗೆ ಫಲಕಾರಿಯಾಗದೆ  ಅನುರಾಧ ಮೃತಪಟ್ಟಿದ್ದಾಳೆ.ಸದ್ಯ ರಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!