ಶಿಕ್ಷಣ

ಮದರ್ ತೆರೇಸಾ ಪದವಿಪೂರ್ವ ಕಾಲೇಜಿನಲ್ಲಿ “ಸಜೀವ ಪ್ರಕೃತಿಗೆ ನಮನ” ಆರೋಗ್ಯ ಮತ್ತು ಬಯೋ ವೈವಿದ್ಯ ಸಂವಾದ

Views: 22

ಕನ್ನಡ ಕರಾವಳಿ ಸುದ್ದಿ: ಶಂಕರ ನಾರಾಯಣ ಮದರ್ ತೆರೆಸಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ದಿನಾಂಕ 8.07.2025ರಂದು ಆರೋಗ್ಯ ಮತ್ತು ಜೀವ ವೈವಿಧ್ಯದ ಜ್ಞಾನ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಯುಷ್ ಸಚಿವಾಲಯದಿಂದ ರಾಷ್ಟ್ರೀಯ ಗುರು ಎಂದು ಬಿರುದಾಂಕಿತರಾದ ಡಾ .ವೈದ್ಯ ಟಿ.ಶ್ರೀಧರ ಬಾಯರಿ ಆಗಮಿಸಿದ್ದರು.

ಇವರು ಆರೋಗ್ಯ ಮತ್ತು ಜೀವ ವೈವಿಧ್ಯದ ಕುರಿತು ಮಾತನಾಡುತ್ತಾ, 21ನೇ ಶತಮಾನದಲ್ಲಿ ಪ್ರಕೃತಿಯಿಂದ ದೂರವಾಗಿ ಬದುಕುತ್ತಿರುವ ನಮಗೆ ಜೀವವೈವಿಧ್ಯದ ಜೊತೆಗಿನ ಬದುಕು ಅಗತ್ಯ ಹಾಗೂ ಅನಿವಾರ್ಯ ಹಾಗಾಗಿ ಮನುಷ್ಯನ ಆಲೋಚನೆಗಳು ವಿಶ್ವಮಟ್ಟದವರೆಗೂ ತಲುಪಿದರು ಕೂಡ ಆತನ ಬದುಕಿನ ಗತಿ ನಿಸರ್ಗದೊಂದಿಗೆ ಸ್ಥಳೀಯವಾಗಿರಬೇಕು ಎಂಬುದನ್ನು ಅತ್ಯಂತ ಸರಳವಾಗಿ ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಈ ಸಂವಾದದಲ್ಲಿ ಮದರ್ ತೆರೆಸಾ ಶಾಲಾ ವಿಭಾಗದ ಆಯುರ್ಧಾಮ ಮತ್ತು ಧರಿತ್ರಿ ಮಿತ್ರ ಕ್ಲಬ್ ನ ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಜೇಸನ್ ಲೂಯಿಸ್ ಹಾಗೂ ಇತರ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕು‌ವರ್ಷಿಣಿ ಕಾರ್ಯಕ್ರಮ ನಿರೂಪಿಸಿ, ಪ್ರತೀಕ್ಷಾ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನವಾಯಿತು.

Related Articles

Back to top button