ಇತರೆ

ಮಗು ಜೋರಾಗಿ ಅಳುತ್ತಿದೆ ಎಂದು ಸಮಾಧಾನ ಪಡಿಸಲು ಗಂಡ ವೀಡಿಯೋ ಕಾಲ್ ರಿಸೀವ್ ಮಾಡಿಲ್ಲ: ಪತ್ನಿ ವಿಷ ಸೇವಿಸಿ ಆತ್ಮಹತ್ಯೆ  

Views: 256

ಕನ್ನಡ ಕರಾವಳಿ ಸುದ್ದಿ: ಪತಿ ವೀಡಿಯೋ ಕಾಲ್ ತೆಗೆಯಲಿಲ್ಲ ಎಂಬ ಕಾರಣಕ್ಕೆ ವಿವಾಹಿತ ಮಹಿಳೆಯೊಬ್ಬರು ಇಲಿ ಪಾಷಾಣ ಸೇವಿಸಿ ಮೃತಪಟ್ಟಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ನಲ್ಲಿ ನಡೆದಿದೆ.

ವಾರಂಗಲ್ ಜಿಲ್ಲೆಯ ನೆಕ್ಕೊಂಡ ಮಂಡಲದ ಬೊಳ್ಳಿಕೊಂಡ ಗ್ರಾಮದ ಅಖಿಲಾ (20) ಮೃತ ವಿವಾಹಿತೆ. ಸುಮಾರು ಎರಡು ವರ್ಷಗಳ ಹಿಂದೆ ಮಹಬೂಬಾಬಾದ್‌ನ ಹೌಸಿಂಗ್ ಫೈನಾನ್ಸ್ ಮ್ಯಾನೇಜರ್ ಬನೋತ್ ಹುಸೇನ್‌ ಅವರನ್ನು ವಿವಾಹವಾಗಿದ್ದ ಅಖಿಲಾಗೆ ಚಿಕ್ಕ ಮಗುವಿತ್ತು.

ಇತ್ತೀಚೆಗೆ ಅಖಿಲಾ ಅವರು ತನ್ನ ಹೆತ್ತವರ ಮನೆಯಲ್ಲಿದ್ದರು. ಮಗು ಜೋರಾಗಿ ಅಳುತ್ತಿದ್ದೆಂದು ಸಮಾಧಾನ ಪಡಿಸಲು ತಂದೆಯೊಂದಿಗೆ ಮಾತನಾಡಿಸಲು ಪತಿಗೆ ವಿಡಿಯೋ ಕಾಲ್ ಮಾಡಲು ಅಖಿಲಾ ಪ್ರಯತ್ನಿಸಿದ್ದರು. ಆದರೆ ಹುಸೇನ್ ಕರೆ ಸ್ವೀಕರಿಸಲಿಲ್ಲ. ಇದರಿಂದ ಅಖಿಲಾ ತೀವ್ರವಾಗಿ ಬೇಸರಗೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಆದರೆ ಬಳಿಕ ಅತ್ತೆ ಮಾವನ ಮನೆಗೆ ಬಂದಿದ್ದ ಅಖಿಲಾ ತೀವ್ರ ಬೇಸರದಿಂದ ದುಡುಕು ನಿರ್ಧಾರ ತೆಗೆದುಕೊಂಡಿದ್ದಾಳೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ನಡುವೆಯೇ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಅಖಿಲಾ ವಿಷ ಸೇವಿಸಲು ಕಾರಣವಾದ ಸಂಪೂರ್ಣ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button
error: Content is protected !!