ಧಾರ್ಮಿಕ
ಮಂಗಳೂರು: ಬಪ್ಪನಾಡು ಜಾತ್ರೆ ವೇಳೆ ಮೇಲ್ಬಾಗ ಕುಸಿದು ಬಿದ್ದ ರಥ

Views: 232
ಕನ್ನಡ ಕರಾವಳಿ ಸುದ್ದಿ: ಕರಾವಳಿಯ ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ವೇಳೆ ರಥ ಮುರಿದು ಬಿದ್ದ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ವರ್ಷಾವಧಿ ಜಾತ್ರೆಯ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿರುವಾಗ ರಥದ ಮೇಲ್ಬಾಗ ಮುರಿದು ಬಿದ್ದಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. ಈ ವೇಳೆ, ಕ್ಷೇತ್ರದಲ್ಲಿ ಸಾಕಷ್ಟು ಭಕ್ತರು ಹಾಗೂ ಅರ್ಚಕರು ರಥದಲ್ಲೇ ಇದ್ದರು.ರಥ ಬೀದಿಗಳಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ತೇರಿನ ಮೇಲ್ಬಾಗ ಕುಸಿದ ವೇಳೆ ಅರ್ಚಕರು ತೇರಿನಲ್ಲೇ ಇದ್ದರು, ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗದೆ ಪಾರಾಗಿದ್ದಾರೆ.
ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕೂರಿಸಿ ಉತ್ಸವ ಮುಂದುವರಿಸಿ, ವಿಧಿವಿಧಾನಗಳನ್ನು ನೆರವೇರಿಸಲಾಯಿತು.