ಕೃಷಿ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯಲು : ಕಂದಾಯ ಸಚಿವರಿಗೆ ಮನವಿ

Views: 0

ಬೆಂಗಳೂರು : ಭೂ ಸ್ವಾಧೀನ ನ್ಯಾಯೋಚಿತ ಪರಿಹಾರ ಮತ್ತು ಪಾರದಶ೯ಕತೆ ಹಕ್ಕು ಕಾಯ್ದೆ – 2013 ಮತ್ತು ಕನಾ೯ಟಕ ಭೂಸುಧಾರಣಾ ಕಾಯ್ದೆಗೆ ಹಿಂದಿನ ಸರಕಾರ ಸುಗ್ರೀವಾಜ್ಞೆಯ ಮೂಲಕ ತಂದ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಆಂದೋಲನದ ಸದಸ್ಯರು ಕಂದಾಯ ಸಚಿವರು ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಈ ಕಾಯ್ದೆಗೆ 2019 ರಲ್ಲಿ ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು, ರೈತ ಮತ್ತು ಭೂಮಾಲಿಕರ ಪರ ಇದ್ದ ಅಂಶಗಳನ್ನು ತೆಗೆದು ಹಾಕಿದೆ.

ಬಿಜೆಪಿ ಸರಕಾರ 2020 ರಲ್ಲಿ ಕನಾ೯ಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಾಯ್ದೆಯಲ್ಲಿದ್ದ ಕೆಲವು ಬಹುಮುಖ್ಯ ಅಂಶಗಳನ್ನು ತೆಗೆದು ಹಾಕಿದೆ ಮತ್ತು ಬದಲಿಸಿದೆ.

ಈ ಕಾನೂನು ತಿದ್ದುಪಡಿಗಳನ್ನು ವಾಪಾಸು ಪಡೆದು ರೈತರ ಪರ ಸರಕಾರ ನಿಲ್ಲಬೇಕು ಎಂದು ಆಂದೋಲನದ ಸದಸ್ಯರು ಒತ್ತಾಯಿಸಿದ್ದಾರೆ.

Related Articles

Back to top button
error: Content is protected !!