ಕರಾವಳಿ
ಭೂಮಿಯ ಸನಿಹಕ್ಕೆ ಶುಕ್ರ ಗೃಹ ಪ್ರಭೆ

Views: 0
ಮೇ 30 ರಿಂದ ಜುಲೈ ಅಂತ್ಯದ ವರೆಗೂ ಶುಕ್ರ ಆಗಸದಲ್ಲಿ ವಿಜ್ರಂಭಿಸಲಿದ್ದಾನೆ. ಅಗಸ್ಟ್ 8 ರಿಂದ 19 ರವರೆಗಿನ ಅವಧಿಯಲ್ಲಿ ಸೂಯ೯ನಿಗೆ ನೇರವಾಗಿ ಬಂದಾಗ ಆ ಪ್ರಕರತೆ ಕಡಿಮೆಯಾಗಿ ಶುಕ್ರ ಗೃಹ ಅಸ್ತವಾಗಿ ಬಳಿಕ ಪೂವ೯ ಆಕಾಶದಲ್ಲಿ ಎಂದಿನಂತೆ ಬೆಳಗಿನ ಜಾವ ಮಾತ್ರ ಗೋಚರಿಸಲಿದೆ.
ಬರಿಗಣ್ಣಿನಿಂದ ಕಾಣುವ ಗೃಹಗಳಲ್ಲಿ ಸೂಯ೯ನಿಂದ 2 ನೇ ಶುಕ್ರ ಗೃಹವೇ ಹೆಚ್ಚು ಪ್ರಕಾಶಮಾನ, ಹೀಗಾಗಿ ಬೆಳ್ಳಿ ಚುಕ್ಕಿ ಎಂದಿದ್ದಾರೆ ಕವಿಗಳು. ಶೇ. 95 ಇಂಗಾಲದ ಆಕ್ಸೈಡ್ ಗಳ ವಾತಾವರಣ ಸ್ವಲ್ಪ ರಂಜಕದ ಡೈ ಆಕ್ಸೈಡ್ ಹೊಂದಿರುವ ಶುಕ್ರ ಗೃಹ ಅತಿ ಹೆಚ್ಚು ಸೂಯ೯ನ ಬೆಳಕನ್ನು ಪ್ರತಿಫಲಿಸುತ್ತದೆ, ಇದೇ ಹೊಳಪಿಗೆ ಕಾರಣ .ಜುಲೈ 7 ರಂದು ಹೆಚ್ಚಿನ ಪ್ರಭೆಯೊಂದಿಗೆ ಆಕಾಶದಲ್ಲಿ ಗೋಚರಿಸಲಿದೆ.






