ಭಿತ್ತಿಪತ್ರ ಹಂಚುತ್ತಿದ್ದ SSLC ವಿದ್ಯಾರ್ಥಿ ಹಾಲಿನ ಟ್ಯಾಂಕರ್ ನಡಿ ಸಿಲುಕಿ ಸಾವು

Views: 83
ಕನ್ನಡ ಕರಾವಳಿ ಸುದ್ದಿ: ಹಾಲಿನ ಟ್ಯಾಂಕರ್ ಹರಿದು ಹಿಂಬದಿ ಸವಾರ ಮೃತಪಟ್ಟ ಘಟನೆ ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯ ಟಾಟಾ ಇನ್ಸ್ಟಿಟ್ಯೂಟ್ ಬಳಿ ಇಂದು ನಡೆಯಿತು. ಶ್ರೀರಾಂಪುರ ನಿವಾಸಿ ಹರ್ಷ(17) ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರ ಸಚಿನ್ ಗಾಯಗೊಂಡಿದ್ದಾರೆ. ಸದಾಶಿವನಗರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನ್ಯೂ ಬಿಇಎಲ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್ ವೊಂದರ ಉದ್ಯೋಗಿಗಳಾಗಿದ್ದ ಸಚಿನ್ ಹಾಗೂ ಹರ್ಷ, ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತಲೂ ಮುಂಚಿತವಾಗಿ ಕೆಲಸಕ್ಕೆ ಹೊರಟಿದ್ದರು. ಟಾಟಾ ಇನ್ಸ್ಟಿಟ್ಯೂಟ್ ಬಳಿ ಹಾಲಿನ ಟ್ಯಾಂಕರ್ ಅನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಸಚಿನ್ ಹಾಗೂ ಹರ್ಷ ಆಯತಪ್ಪಿ ಬೈಕ್ ಸಮೇತ ನೆಲಕ್ಕೆ ಬಿದ್ದಿದ್ದರು. ಅದೇ ಸಂದರ್ಭದಲ್ಲಿ ಟ್ಯಾಂಕರ್ ಚಕ್ರ ಹಿಂಬದಿ ಸವಾರ ಹರ್ಷ ಅವರ ಮೇಲೆ ಹರಿದಿದೆ.
ಹರ್ಷ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳು ಸಚಿನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದಾಶಿವನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.