ಜನಮನ

ಭಾರಿ ಮಳೆಯಿಂದಾಗಿ ರೈಲು ಮಾರ್ಗ ಪ್ರದೇಶದಲ್ಲಿ ಭೂಕುಸಿತ, ರೈಲುಗಳ ಮಾರ್ಗ ತುರ್ತು ಬದಲಾವಣೆ

Views: 55

ಕನ್ನಡ ಕರಾವಳಿ ಸುದ್ದಿ: ಸಿರಿಬಾಗಿಲು-ಯಡಕುಮಾರಿ, ಕಡಗರವಳ್ಳಿ, ದೋಣಿಗಲ್ ವಿಭಾಗಗಳ ನಡುವೆ ಭೂಕುಸಿತ ಮತ್ತು ಭಾರಿ ಮಳೆಯಿಂದಾಗಿ, ಈ ಕೆಳಗಿನ ರೈಲು ಸೇವೆಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಬದಲಾದ ರೈಲುಗಳ ಮಾಹಿತಿ: ಮಂಗಳೂರು–ವಿಜಯಪುರ (07378) ವಿಶೇಷ ಎಕ್ಸ್‌ಪ್ರೆಸ್ : ಟೋಕುರ್, ಕಾರವಾರ, ಮಡಗಾಂವ್, ಲೋಂಡಾ, ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದೆ. ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಮಾರ್ಗದ ಎಲ್ಲಾ ನಿಲ್ದಾಣಗಳನ್ನು ಈ ರೈಲು ತಪ್ಪಿಸಲಿದೆ.

ಮುರ್ಡೇಶ್ವರ–ಎಸ್‌ಎಂವಿಟಿ ಬೆಂಗಳೂರು ರೈಲು (16586) : ಕಾಸರಗೋಡು, ಶೋರಣೂರು, ಪಾಲಕ್ಕಾಡ್, ಸೇಲಂ, ಜೊಲಾರ್‌ಪಟ್ಟಣ ಮಾರ್ಗವಾಗಿ ಸಂಚರಿಸಲಿದ್ದು, ಮೈಸೂರು ಮಾರ್ಗವನ್ನು ತಪ್ಪಿಸಲಿದೆ.

ಕಣ್ಣೂರು–ಕೆಎಸ್‌ಆರ್ ಬೆಂಗಳೂರು (16512) ರೈಲು : ಶೋರಣೂರು, ಪಾಲಕ್ಕಾಡ್, ಸೇಲಂ, ಜೊಲಾರ್‌ಪಟ್ಟಣ ಮಾರ್ಗವಾಗಿ ಚಲಿಸಲಿದೆ. ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಕಾರವಾರ–ಕೆಎಸ್‌ಆರ್ ಬೆಂಗಳೂರು (16596) ರೈಲು : ಮಂಗಳೂರು ಜಂಕ್ಷನ್, ಕಾಸರಗೋಡು, ಪಾಲಕ್ಕಾಡ್ ಸೇಲಂ, ಜೊಲಾರ್‌ಪಟ್ಟಣ ಮಾರ್ಗವಾಗಿ ಸಾಗಲಿದೆ.

ಪುನರ್ ಸ್ಥಾಪನೆ ಕಾರ್ಯ ನಡೆಯುತ್ತಿದೆ: ಸಕಲೇಶಪುರದಿಂದ ಸಂಜೆ 5:58ಕ್ಕೆ ಮೆಟೀರಿಯಲ್ ರೈಲು ಕಾರ್ಯ ಸ್ಥಳಕ್ಕೆ ತೆರಳಿದ್ದು, ಭೂಕುಸಿತವಾದ ಸ್ಥಳದ ಮಣ್ಣು ತೆರವು ಕಾರ್ಯ ಪ್ರಗತಿಯಲ್ಲಿದೆ. ಈ ಬಗ್ಗೆ ದಕ್ಷಿಣ ಪಶ್ಚಿಮ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಖುಲ್ ಸರನ್ ಮಥುರ, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಶ್ರೀ ಕೆ. ಎಸ್. ಜೈನ್ ಹಾಗೂ ಎಲ್ಲಾ ಪ್ರಮುಖ ವಿಭಾಗದ ಅಧಿಕಾರಿಗಳು ಸ್ಥಳೀಯ ಸ್ಥಿತಿಗತಿಗಳನ್ನು ಗಮನಿಸುತ್ತಿದ್ದಾರೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button