ಕನ್ನಡ ಕರಾವಳಿ ಸುದ್ದಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ.ಈ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬೆನ್ನಲ್ಲೇ ರಾಜ್ಯ ಪ್ರವಾಸಿ ತಾಣಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಬಂದರು ಪ್ರದೇಶ, ಮಲ್ಪೆ ಬೀಚ್, ಕುಂದಾಪುರ, ದ.ಕನ್ನಡದ ಪ್ರವಾಸಿ ತಾಣಗಳು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ವಿಚಾರಣೆ ಮಾಡಲು ಕೂಡ ಸೂಚನೆ ನೀಡಲಾಗಿದೆ.
ಶಿವಮೊಗ್ಗ, ಮಂಗಳೂರು, ಭಟ್ಕಳ, ಹುಬ್ಬಳ್ಳಿಯ ಪ್ರವಾಸಿ ತಾಣಗಳ ಬಳಿ ರೌಂಡ್ಸ್ ಹೆಚ್ಚಿಸಲು ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಪ್ರವಾಸಿ ತಾಣಗಳ ಬಳಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ವಿಚಾರಣೆ ಮಾಡಬೇಕು ಅಂತ ತಿಳಿಸಲಾಗಿದೆ. ರಾಜ್ಯ ಕರಾವಳಿ ತೀರದ 324 ಕಿ.ಮೀ. ಉದ್ದಕ್ಕೂ ಪ್ರತೀ ಒಂದು ಕಿ.ಮೀ.ಗೆ ತಲಾ 2 ಮಂದಿಯಂತೆ ಸಿಬಂದಿಯನ್ನು ನಿಯೋಜನೆಗೊಳಿಸಿದೆ. ಸಮುದ್ರದಲ್ಲಿ 13 ಬೋಟ್‌ಗಳು ಗಸ್ತು ನಿರತವಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸಿಬಂದಿ ನಿಯೋಜನೆ ಮಾಡಲಾಗುವುದು ಎಂದು ಕೋಸ್ಟ್ ಗಾರ್ಡ್ ಮೂಲಗಳು ತಿಳಿಸಿವೆ.