ಇತರೆ
ಭಟ್ಕಳ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಯುವಕರ ದುರ್ಮರಣ
Views: 121
ಕನ್ನಡ ಕರಾವಳಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಭಟ್ಕಳದ ವೆಂಕಟಾಪುರದ ಬಳಿ ನಡೆದಿದೆ. ಭಟ್ಕಳದ ಆಜಾದ್ ನಗರ ನಿವಾಸಿ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪಾಯಿಯವರ ಪುತ್ರ ಬಿಲಾಲ್ (15) ಹಾಗೂ ಆಯಾನ್ (20) ಮೃತರು.
ಅಪಘಾತದ ವೇಳೆ ಬಿಲಾಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲನೆ ಮಾಡುತ್ತಿದ್ದ ಆಯಾನ್ ಗಾಯಗೊಂಡಿದ್ದ. ಆತನನ್ನು ಉಡುಪಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ಈ ಸಂಬಂಧ ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






