ಇತರೆ

ಬ್ರಹ್ಮಾವರ: ಮಗುವಿಗೆ ನೇಣುಬಿಗಿದು ತಾಯಿ ಆತ್ಮಹತ್ಯೆ ಪ್ರಕರಣ: ನಿಗೂಢ ಆತ್ಮಹತ್ಯೆ ರಹಸ್ಯಬಯಲು! 

Views: 1029

ಕನ್ನಡ ಕರಾವಳಿ ಸುದ್ದಿ: ಮಗುವಿಗೆ ನೇಣುಬಿಗಿದು ಕೊಲೆ ಮಾಡಿ ಬಳಿಕ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಹೆರಂಜೆ ಕ್ರಾಸ್ ಬಳಿ ಸೋಮವಾರ ಸಂಭವಿಸಿದೆ

ಮೃತರನ್ನು ಸುಷ್ಮೀತಾ (23) ಹಾಗೂ ಮಗು ಶ್ರೇಷ್ಠ (1.6ವ) ಎಂದು ಗುರುತಿಸಲಾಗಿದೆ.

ಪತಿಯ ಹಳೆ ಕೇಸು ರಿಓಪನ್ ಮಾಡುವುದಾಗಿ ಪೊಲೀಸರು ಬೆದರಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಹೆದರಿದ ಪತ್ನಿ ಮಗುವಿಗೆ ಮೊದಲು ನೇಣು ಬಿಗಿದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಸೆ.1ರಂದು ಸುಭಾಶ್ ಮನೆಯಲ್ಲಿ ಸುಶ್ಮಿತಾ,  ಮಗು, ಅಮಿತಾ ಎಂಬವರು ಇದ್ದರು. ಅಮಿತಾ ರಾಷ್ಟ್ರೋತ್ಥಾನ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದು ಶಾಲೆಯ ಕೆಲಸಕ್ಕೆ ಹೋಗಿದ್ದರು. ಸೆ.1ರಂದು ಬೆಳಿಗ್ಗೆ ಪುನಃ ಪೊಲೀಸರು ಸುಭಾಶ್ ಹಾಗೂ ಉಳಿದವರನ್ನು ಹುಡುಕಿಕೊಂಡು ಬಂದಿದ್ದರು. ಈ ಸಂದರ್ಭ ಸುಶ್ಮಿತಾಳಿಗೆ ಅರೆಸ್ಟ್ ವಾರಂಟ್ ಇದೆ ಎಂಬುದು ಪೊಲೀಸರಿಂದ ತಿಳಿದು ಬಂತು. ಅರೆಸ್ಟ್ ವಾರಂಟ್ ಎಂದಿದ್ದರಿಂದ ಹೆದರಿದ ಸುಶ್ಮಿತಾ ಪೊಲೀಸರು ಹೋದ ನಂತರ ತನ್ನ ಸಂಬಂಧಿ ಕುಂದಾಪುರದಲ್ಲಿದ್ದ ಅನುಶ್ರೀಯವರಿಗೆ ಫೋನ್ ಮಾಡಿ ‘ಪೊಲೀಸರು ಬಂದು ನನ್ನ ಗಂಡನ ಮೇಲೆ ಅರೆಸ್ಟ್ ವಾರಂಟ್ ಇದೆ ಎಂದು ಹೇಳಿದ್ದಾರೆ. ನನಗೆ ಹೆದರಿಕೆ ಆಗುತ್ತಿದೆ” ಎಂದು ತಿಳಿಸಿದ್ದಳು. ಆಗ ಅನುಶ್ರೀ ಸುಶ್ಮಿತಾಳಿಗೆ ಧೈರ್ಯ ಹೇಳಿ ‘ಹೆದರಬೇಡ, ವಕೀಲರ ವ್ಯವಸ್ಥೆ ಹಾಗೂ ಹಣದ ವ್ಯವಸ್ಥೆ ಮಾಡಿದ್ದೇನೆ, ಮೇಲ್ಮನವಿಗೆ ಹೋಗಲಿದ್ದೇವೆ’ ಎಂದು ಹೇಳಿದ್ದರು. ಮಧ್ಯಾಹ್ನ ಪುನಃ ಸುಮಾರು 1.30 ಗಂಟೆಗೆ ಅನುಶ್ರೀ ಸುಶ್ಮಿತಾಳಿಗೆ 6 ಬಾರಿ ಫೋನ್ ಮಾಡಿದರೂ ಸುಶ್ಮಿತಾ ಫೋನ್ ರಿಸಿವ್ ಮಾಡದೇ ಇರುವುದರಿಂದ ಬ್ರಹ್ಮಾವರದ ದೀಪ್ತಿ ಎಂಟರ್‌ಪ್ರೈಸಸ್‌ನಲ್ಲಿ ಕೆಲಸ ಮಾಡಿಕೊಂಡಿರುವ ಶರತ್ ಎಂಬವರಿಗೆ ಫೋನ್ ಮಾಡಿ ಸುಶ್ಮಿತಾಳ ಮನೆ ಸಮೀಪ ಹೋಗಿ ನೋಡಲು ಹೇಳಿದ್ದರು. ಶರತ್ ಸುಶ್ಮಿತಾಳ ಮನೆಗೆ ಹೋದಾಗ ಮನೆ ಬಾಗಿಲು ಹಾಕಿಕೊಂಡಿದ್ದು ಮನೆಯ ಹಿಂಬದಿಯ ಕಿಟಕಿಯಿಂದ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು.

ಡೆತ್ ನೋಟ್ ಬರೆದಿಟ್ಟಿದ್ದು ‘ ರಿ ಸಾರಿ, ನಾನು ಏನು ತಪ್ಪು ಮಾಡಿದ್ದರೂ ಕ್ಷಮಿಸಿ, ನನ್ನ ಮಗುವನ್ನು ನಾನು ಇದ್ದಲ್ಲಿಗೆ ಕರೆದುಕೊಂಡು ಹೋಗುತ್ತಾ ಇದ್ದೇನೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿದ್ದಳು ಎಂದು ದೂರು ನೀಡಿರುವ ಅನುಶ್ರೀ ಬಿ.ಶೆಟ್ಟಿ ತಿಳಿಸಿದ್ದಾರೆ.

ಸುಭಾಶ್ ಹಾಗೂ ಸುಶ್ಮಿತಾ ಪ್ರೀತಿಸಿ ಮದುವೆಯಾಗಿದ್ದು ಪ್ರತ್ಯೇಕ ವಾಸಿಸುತ್ತಿದ್ದರು. ಸುಶ್ಮಿತಾ ಮನೆಯವರಿಂದ ಅಂತರ ಕಾಯ್ದುಕೊಂಡಿದ್ದರು. ಗಂಡನನ್ನು ಪೊಲೀಸರು ಬಂಧಿಸಿದರೆ ನನಗೆ ನನ್ನ ಮನೆಯವರ ಸಹಕಾರವೂ ಸಿಗಲ್ಲ ಎಂದು ಭಾವಿಸಿರಬಹುದು. ಆಕೆಗೆ ಆರ್ಥಿಕ ಸಮಸ್ಯೆಯೂ ಇದ್ದು ‘ಮಗುವಿಗೆ ಹಾಲು ತಂದು ಕೊಡಲು ಕೂಡ ನನ್ನಲ್ಲಿ ಹಣ ಇಲ್ಲ ಎಂದು ಹೇಳಿಕೊಂಡಿದ್ದಳಂತೆ. ಹಣದ ಸಮಸ್ಯೆಯೂ ಸಾವಿಗೆ ಕಾರಣ ಇರಬಹುದು ಎನ್ನುತ್ತಾರೆ ಸ್ಥಳಿಯರು.

Related Articles

Back to top button