ಇತರೆ

ಬ್ರಹ್ಮಾವರದಲ್ಲಿ ಮಗುವನ್ನು ನೇಣಿಗೆ ಹಾಕಿ ತಾಯಿ ಆತ್ಮಹತ್ಯೆ

Views: 501

ಕನ್ನಡ ಕರಾವಳಿ ಸುದ್ದಿ: ಮಗುವನ್ನು ನೇಣಿಗೆ ಹಾಕಿ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಜಾಲು ಸಮೀಪದ ಹೇರಂಜೆ ಕ್ರಾಸ್ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಸುಷ್ಮೀತಾ (35) ಹಾಗೂ ಅವರ ಮಗು ಶ್ರೇಷ್ಠ (1ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ.

ನನ್ನ ಸಾವಿಗೆ ನಾನೇ ಕಾರಣ ಎಂಬುದಾಗಿ ಮರಣ ಪತ್ರ ಬರೆದಿಟ್ಟು ಸುಷ್ಮಿತಾ ತನ್ನ ಮಗು ಜೊತೆ ನೇಣಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಪತಿ ತನ್ನ ಹಳೆಯ ಕೇಸಿಗೆ ಸಂಬಂಧಿಸಿ ಬೆಂಗಳೂರು ನ್ಯಾಯಾಲಯಕ್ಕೆ ತೆರಳಿದ್ದು ಈ ವೇಳೆ ಮನೆಗೆ ಪೊಲೀಸರು ಬಂದು ಈಕೆಯನ್ನು ಪತಿಯ ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ    ಎಂದು ತಿಳಿದುಬಂದಿದೆ.ಇದರಿಂದ ಹೆದರಿದ ಪತ್ನಿ ಮಗುವಿಗೆ ನೇಣು ಬಿಗಿದು ಕೊಲೆ ಮಾಡಿ ಬಳಿಕ ತಾನೂ ಕೂಡ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

 

Related Articles

Back to top button