ಇತರೆ

ಬುರುಡೆ ಗ್ಯಾಂಗ್ ಸೂತ್ರಧಾರಿಗಳು ಸುಳ್ಳು ಹೇಳೋಕೆ ನೀಡಿದ ಸುಪಾರಿ ಹಣವೆಷ್ಟು..?ಎಸ್‌ಐಟಿ ಮುಂದೆ ಬಾಯ್ಬಿಟ್ಟ ಚಿನ್ನಯ್ಯ!

Views: 222

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಬಳಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ ಪ್ರಕರಣದ ಸಂಬಂಧ ಬಂಧಿತ ಮುಸುಕುಧಾರಿ ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ಚಿನ್ನಯ್ಯನಿಗೆ ಬುರುಡೆ ಗ್ಯಾಂಗ್ ಸೂತ್ರಧಾರಿಗಳು ಹಣ ನೀಡಿ ಹೀಗೆ ಹೇಳಬೇಕು ಅಂತ ಬೆದರಿಕೆ ಹಾಕಿದ್ದರು. ನನಗೆ ಇದೇ ರೀತಿಯ ಹೇಳಿಕೆ ನೀಡಬೇಕು ಎಂದು ಹೇಳಿ ಕೊಟ್ಟರು. ಪ್ರಕರಣದ ಒಂದು ಹಂತದಲ್ಲಿ ನಾನು ದೂರವಾಗಲು ಬಯಸಿದಾಗ ನನಗೆ ಹೆದರಿಕೆ ಹಾಕಿದರು. ಸಹಾಯ ಮಾಡುವ ರೀತಿಯಲ್ಲಿ ಹಣ ಕೊಟ್ಟಿದ್ದಾರೆ. ಐದು ಹತ್ತು ಸಾವಿರ ಹೀಗೆ ಹಂತ ಹಂತವಾಗಿ ಮೂರುವರೆಯಿಂದ ನಾಲ್ಕು ಲಕ್ಷದ ತನಕ ಹಣ ನೀಡಿದರು ಎಂದು ಹೇಳಿಕೆ ನೀಡಿದ್ದಾನೆ.

ಕೊನೆಯ ಹಂತದಲ್ಲಿ ನಾನು ಇವರಿಂದ ದೂರವಾಗುವುದಕ್ಕೆ ಬಯಸಿದ್ದೆ. ನಿನ್ನ ಬಿಡುವುದಿಲ್ಲ ಹೊಡೆದು ಮುಗಿಸುತ್ತಾರೆ ಎಂದು ಈ ಗ್ಯಾಂಗ್ ಬೆದರಿಕೆ ಹಾಕಿತ್ತು. ನಿನಗೆ ಎಲ್ಲಾ ಗೊತ್ತಿದೆ ಎಂದು ಬೆದರಿಕೆ ಹಾಕಿದರು. ನಾವು ಹೇಳಿದ ಹಾಗೆ ಕೇಳಿಲ್ಲ ಅಂದರೆ ನಿನ್ನ ವಿರುದ್ಧವೇ ಕೇಸ್ ಹಾಕುತ್ತೇವೆ. ನಿನಗೆ ಜೀವಾವಧಿ ಶಿಕ್ಷೆ ಆಗುತ್ತದೆ ಎಂದು ನನ್ನನ್ನು ಹೆದರಿಸಿದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾನೆ.

ಪ್ರಕರಣದಲ್ಲಿ ದೊಡ್ಡ ಸದ್ದು ಮಾಡಿದ್ದ ತಲೆ ಬುರುಡೆಯನ್ನು ಮಹೇಶ್ ಶೆಟ್ಟಿ ತಿಮರೋಡಿ ತೋಟದಿಂದ ತರಲಾಗಿದೆ ಎನ್ನುವ ಮಾಹಿತಿಯನ್ನು ಚಿನ್ನಯ್ಯ ನೀಡಿದ್ದಾನೆ.

ಕೋರ್ಟ್‌ಗೆ ಹಾಜರುಪಡಿಸಿದ ಬುರುಡೆ ಜೊತೆ ಇದ್ದ ಮಣ್ಣುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ಕ್ಕೆ ಪೊಲೀಸರು ಕಳುಹಿಸಿದ್ದರು. ಲ್ಯಾಬ್‌ನಲ್ಲಿ ಧರ್ಮಸ್ಥಳದ ಅಸುಪಾಸಿನಲ್ಲಿ ಇರುವ ಮಣ್ಣಿಗೂ ಬುರುಡೆಯಲ್ಲಿರುವ ಮಣ್ಣಿನ ಸಾಮ್ಯತೆ ಇಲ್ಲ ಎಂಬ ವಿಚಾರ ದೃಢಪಟ್ಟಿತ್ತು.

ಎಫ್‌ಎಸ್‌ಎಲ್‌ನಿಂದ ಬುರುಡೆ ಸತ್ಯ ರಿವೀಲ್ ಆದ ಬೆನ್ನಲ್ಲೇ ಎಸ್‌ಐಟಿ ಪೊಲೀಸರು ಚಿನ್ನಯ್ಯನನ್ನು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡು ಷಡ್ಯಂತ್ರದ ಭಾಗವಾಗಿ ಬುರುಡೆ ತರಲಾಗಿತ್ತು ಎಂದಿದ್ದಾನೆ. ಮತ್ತಷ್ಟು ವಿಚಾರಣೆ ನಡೆಸಿದಾಗ ಚಿನ್ನಯ್ಯ ತಿಮರೋಡಿ ತೋಟದಿಂದ ಬುರುಡೆ ತಂದಿರುವುದಾಗಿ ಹೇಳಿದ್ದಾನೆ.

ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ತಿಮರೋಡಿ ನಿವಾಸಕ್ಕೆ ಮಹಜರು ಮಾಡಲು ಬಂದಿದ್ದಾಗ ಚಿನ್ನಯ್ಯ ರಬ್ಬರ್ ತೋಟದ ಒಂದು ಜಾಗವನ್ನು ತೋರಿಸಿ ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದ. ಈತನ ಹೇಳಿಕೆಯಂತೆ ಪೊಲೀಸರು ರಬ್ಬರ್ ತೋಟದಿಂದ ಮಣ್ಣುಗಳನ್ನು ತೆಗೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ

ಲ್ಯಾಬ್ ಪರೀಕ್ಷೆಯಲ್ಲಿ ಬುರುಡೆಯಲ್ಲಿರುವ ಮಣ್ಣಿಗೂ ತಿಮರೋಡಿ ತೋಟದಲ್ಲಿರುವ ಮಣ್ಣಿಗೂ ಸಾಮ್ಯತೆ ಕಂಡು ಬಂದರೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಗುವ ಸಾಧ್ಯತೆಯಿದೆ.

ಎಸ್‌ಐಟಿ ತನಿಖೆ ಆರಂಭಿಸುವಾಗಲೇ ಹಲವು ಕಾನೂನು ತಜ್ಞರು ತನಿಖೆಯ ರೀತಿಯನ್ನು ಪ್ರಶ್ನಿಸಿದ್ದರು. ಎಸ್‌ಐಟಿ ಮೊದಲು ಗುಂಡಿ ತೋಡಲು ಜಾಗಗಳನ್ನು ಗುರುತು ಮಾಡುವ ಮೊದಲು ಬುರುಡೆ ಸಿಕ್ಕಿದ ಜಾಗಕ್ಕೆ ಗುರುತು ಹಾಕಿ ಶೋಧ ಆರಂಭಿಸಬೇಕಿತ್ತು. ಬುರುಡೆ ಸಿಕ್ಕಿದರೆ ಅದರ ಮೂಳೆಗಳು ಸಿಗುತ್ತದೆ. ಮೊದಲು ಈ ಜಾಗದಿಂದ ಆರಂಭಿಸದೇ ಬೇರೆ ಜಾಗಗಳನ್ನು ಗುರುತು ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಎತ್ತಿದ್ದರು.

Related Articles

Back to top button