ಸಾಂಸ್ಕೃತಿಕ

ಬಿಗ್‌ ಬಾಸ್ ನಮ್ರತಾ ಗೌಡಗೆ ‘ಡೇಟಿಂಗ್‌’ ಆಫರ್! ಅಪರಿಚಿತನ ಕಿರುಕುಳಕ್ಕೆ ನಟಿ ಏನಂದ್ರು?

Views: 154

ಕನ್ನಡ ಕರಾವಳಿ ಸುದ್ದಿ:  ಬಿಗ್‌ ಬಾಸ್‌ ಮಾಜಿ ಸ್ಪರ್ಧಿ, ಕಿರುತೆರೆ ನಟಿ ನಮ್ರತಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತನಿಂದ ಡೇಟಿಂಗ್ ಕಿರುಕುಳ..ಅಸಭ್ಯವಾದ ಮೆಸೇಜ್‌ಗಳನ್ನು ನೀಡಿದ ಆರೋಪಕ್ಕೆ ಕೋಪಗೊಂಡ ನಟಿ ತನ್ನ ಇನ್ಸ್‌ಸ್ಟಾಗ್ರಾಂನಲ್ಲಿ ಅದರ ಸ್ಕ್ರೀನ್‌ ಶಾಟ್‌ ಹಂಚಿಕೊಂಡು ಉತ್ತರಿಸಿದ್ದಾರೆ.

ನಟಿ ನಮ್ರತಾ ಅವರಿಗೆ ವ್ಯಕ್ತಿಯೊಬ್ಬ ಪದೇ ಪದೇ ಸಂದೇಶ ಕಳಿಸಿ ಟಾರ್ಚರ್ ಕೊಟ್ಟಿದ್ದಾನೆ. ಒಂದೇ ರೀತಿಯ ಮೆಸೇಜ್‌ಗಳು 2-3 ಬಾರಿ ಕಳುಹಿಸಲಾಗಿದೆ. ಮೊದಲು, ಎರಡನೇ ಬಾರಿ ನಿರ್ಲಕ್ಷ್ಯ ಮಾಡಿದ್ದ ನಮ್ರತಾ, ಇದೀಗ ಕಿಡಿಗೇಡಿಗಳ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದ್ದಾರೆ.

‘ಡೇಟಿಂಗ್’ ಮೆಸೇಜ್‌ ನಲ್ಲಿ ಏನಿದೆ?

ಹಾಯ್, ನಾನು ಕೆಲವು ರಾಜಕಾರಣಿಗಳು ಹಾಗೂ VIPಗಳ ಜೊತೆ ಕೆಲಸ ಮಾಡುತ್ತಿದ್ದೇನೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ಗೆ ಬರಲು ಇಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ. ನಿಮ್ಮ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಈ ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದೂ ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ.

ರಾಕಿ ಜಿ43 (Rocky.g43) ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ನಮ್ರತಾ ಅವರಿಗೆ ಈ ಮೆಸೇಜ್‌ಗಳು ಬಂದಿದೆ. ನೇರವಾಗಿ ನನಗೆ ಸಾಕಷ್ಟು ರಾಜಕಾರಣಿಗಳ ಜೊತೆ ನಂಟು ಇದೆ. ರಾಜಕಾರಣಿಗಳ ಜೊತೆಗೆ ಡೇಟಿಂಗ್ಗೆ ಬರಲು ಇಚ್ಛೆ ಇದೆಯಾ? ಅಂತ ನಮ್ರತಾ ಅವರನ್ನು ಕೇಳಿದ್ದಾರೆ. ಡೇಟಿಂಗ್ ಬರಲು ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆ ಸಹ ಒತ್ತಾಯಿಸಲಾಗಿದೆ.

ನಮ್ರತಾ ಗೌಡ ಹೇಳಿದ್ದೇನು?

ನಾನು ಅವನ ರಿಕ್ವೆಸ್ಟ್ ಮೆಸೇಜ್‌ಗಳನ್ನು ಒಪ್ಪಿಕೊಂಡಿಲ್ಲ. ಇವತ್ತು ನನ್ನ ರಿಕ್ವೆಸ್ಟ್ ಮೆಸೇಜ್‌ಗಳ ಲಿಸ್ಟ್ ನೋಡುವಾಗ ಇದು ನನ್ನ ಕಣ್ಣಿಗೆ ಬಿತ್ತು. ಹೀಗಾಗಿ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದೇನೆ. ಇಂತಹ ತುಂಬಾ ಮೆಸೇಜ್‌ಗಳು ಬರುತ್ತಾ ಇರ್ತಾವೆ. ಬಂದಾಗ ನಿರ್ಲಕ್ಷಿಸಿ ನಾವು ಮುಂದೆ ಹೋಗುತ್ತೇವೆ.

ಈ ಬಾರಿ ನಿರ್ಲಕ್ಷ್ಯ ಮಾಡಿದ್ರೂ ಇವರಿಗೆ ಭಯ ಹುಟ್ಟಲ್ಲ ಎಂದು ನಾನು ಇವತ್ತು ಇನ್ಸ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿ ಬಹಿರಂಗ ಮಾಡಿದ್ದೇನೆ. ಇನ್ನು ಮುಂದೆ ಬೇರೆ ಯಾರು ಯಾರಿಗೂ ಈ ರೀತಿಯ ಮೆಸೇಜ್ ಹಾಕಬಾರದು ಅಂತ ಈ ರೀತಿ ಮಾಡಿದ್ದೇನೆಎಂದರು.

Related Articles

Back to top button
error: Content is protected !!