ಬಾಲ್ಕನಿಯಲ್ಲಿ ಆಡುತ್ತಿದ್ದಾಗ 3 ವರ್ಷದ ಬಾಲಕಿ ಆಕಸ್ಮಿಕವಾಗಿ ಬಿದ್ದು ದಾರುಣ ಸಾವು

Views: 71
ನವದೆಹಲಿ: ಪಶ್ಚಿಮ ದೆಹಲಿಯ ಸಾಗರ್‌ಪುರ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಒಂದರ ಮೂರನೇ ಮಹಡಿಯಿಂದ ಬಿದ್ದು ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗಮನಿಸಿದಾಗ ಮಗು ಇದ್ದಕ್ಕಿದ್ದಂತೆ ಕೆಳಗಿನ ಬೀದಿಗೆ ಬಿದ್ದಿದೆ. ಸ್ವಲ್ಪ ಹೊತ್ತಿನ ನಂತರ, ಮಹಿಳೆಯೊಬ್ಬಳು ರಕ್ತದ ಮಡುವಿನಲ್ಲಿ ಬಿದ್ದ ಮಗುವನ್ನು ಕಂಡು ಭಯಭೀತಳಾಗಿ ಮಗುವಿನ ಬಳಿ ಓಡಿ ಬಂದಿದ್ದಾರೆ. ಸ್ವಲ್ಪ ಸಮಯದ ನಂತರ ಬಾಲಕಿಯ ಕುಟುಂಬದವರು ಘಟನಾ ಸ್ಥಳಕ್ಕೆ ಬಂದು ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಗು ಸ್ಥಳದಲ್ಲೇ ಸಾವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಾಲ್ಕನಿಯಲ್ಲಿ ಒಬ್ಬಂಟಿಯಾಗಿ ಆಡುತ್ತಿದ್ದಾಗ ಬಾಲಕಿ ಆಕಸ್ಮಿಕವಾಗಿ ಬಿದ್ದಿರಬಹುದು. ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಪೊಲೀಸರು ಆ ಪ್ರದೇಶದ ಇತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.






