ಪ್ರೇಯಸಿಯನ್ನು ಕೊಂದು ಜೈಲು ಸೇರಿದ್ದ ಪ್ರಿಯಕರ ಹೃದಯಾಘಾತದಿಂದ ಸಾವು
Views: 70
ಕನ್ನಡ ಕರಾವಳಿ ಸುದ್ದಿ: ಲಿವ್-ಇನ್ ಸಂಗಾತಿಯ ಕೊಂದು ಜೈಲು ಸೇರಿದ್ದ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಸೌರಾಷ್ಟ್ರದಲ್ಲಿ ನಡೆದಿದೆ.
ನರೇಂದ್ರ ಸಿಂಗ್ ಧ್ರುವೇಲ್ ಮಧ್ಯಪ್ರದೇಶ ಮೂಲದವನಾಗಿದ್ದು, ಪ್ರೇಯಸಿಯನ್ನು ಕೊಂದು ಜೈಲುಪಾಲಾಗಿದ್ದ. ಜೈಲಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಇಬ್ಬರು ಮೂರು ತಿಂಗಳಿನಿಂದ ವಾಸವಾಗಿದ್ದರು. ಒಂದು ದಿನ, ಇಬ್ಬರ ನಡುವೆ ಜಗಳವಾಗಿತ್ತು. ಆ ವ್ಯಕ್ತಿ ತನ್ನ ಗೆಳತಿ ಪುಷ್ಪಾದೇವಿ ಮರಾವಿಯನ್ನು ಮರದ ಕೋಲು ಮತ್ತು ಬೆಲ್ಟ್ನಿಂದ ಹೊಡೆಯಲು ಪ್ರಾರಂಭಿಸಿದ್ದ. ಮರಾವಿಯ ದೇಹದ ಮೇಲೆ ಗಂಭೀರ ಗಾಯಗಳಾಗಿದ್ದವು. ಇದಲ್ಲದೆ, ಆ ವ್ಯಕ್ತಿ ಮಹಿಳೆಯ ಮುಖವನ್ನು ಕಚ್ಚಿದ್ದ ಎಂದು ಆರೋಪಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯು ಮಹಿಳೆ ತೀವ್ರ ಗಾಯಗಳು ಮತ್ತು ದೈಹಿಕ ನೋವಿನಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಪೊಲೀಸರು ಧ್ರುವೇಲ್‌ನನ್ನು ಬಂಧಿಸಿದಾಗ, ಅವನು ತಾನು ಮಾಡಿದ ಅಪರಾಧವನ್ನು ಆತ ಒಪ್ಪಿಕೊಂಡಿದ್ದ.
ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆಯಲಾಯಿತು. ಆತನಿಗೆ ಎದೆನೋವು ತೀವ್ರವಾಗಿತ್ತು. ಪೊಲೀಸ್ ಸಿಬ್ಬಂದಿ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ತಪಾಸಣೆಯ ನಂತರ ವೈದ್ಯರು ಆತ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ.






