ಯುವಜನ

ಪ್ರೀತಿ ವಿಚಾರದಲ್ಲಿ ಯುವಕನ ಕಿರುಕುಳ:ನೇಣಿಗೆ ಶರಣಾದ ಬಾಲಕಿ

Views: 84

ಕನ್ನಡ ಕರಾವಳಿ ಸುದ್ದಿ: ಪ್ರೀತಿ ವಿಚಾರಕ್ಕೆ ಮನನೊಂದು ಬಾಲಕಿಯೊಬ್ಬಳು ನೇಣಿಗೆ ಶರಣಾದ ಘಟನೆ ಬೆಂಗಳೂರು ಉತ್ತರದ ಅಂಚೇಪಾಳ್ಯ ಪ್ರಕೃತಿ ಲೇಔಟ್‌ನಲ್ಲಿ ನಡೆದಿದೆ.

ತೇಜಸ್ವಿನಿ (17) ಆತ್ಮಹತ್ಯೆಗೆ ಶರಣಾದ ಬಾಲಕಿ. ಪ್ರೀತಿಸುವ ವಿಷಯಕ್ಕೆ ಯುವಕನೋರ್ವ ಕಿರುಕುಳ ನೀಡುತ್ತಿದ್ದು ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯ ಪೋಷಕರು ಯುವಕನೊಬ್ಬನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

Back to top button
error: Content is protected !!