ಯುವಜನ
ಪ್ರೀತಿಗೆ ಮನೆಯವರ ವಿರೋಧ; ಒಂದೇ ಮರಕ್ಕೆ ನೇಣು ಹಾಕಿಕೊಂಡ ಪ್ರೇಮಿಗಳು

Views: 173
ಬಾಗಲಕೋಟೆ: ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಪ್ರೇಮಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ನಡೆದಿದೆ.
ಸಚಿನ್ ಭೀಮಪ್ಪ ದಳವಾಯಿ (22), ಪ್ರತಿಭಾ ಮಡಿವಾಳ (19) ಮೃತ ಪ್ರೇಮಿಗಳು.
ಇಬ್ಬರು ಬೇರೆ ಬೇರೆ ಜಾತಿಯ ಪ್ರೇಮಿಗಳಾಗಿದ್ದು, ಪ್ರೀತಿ ಮಾಡೋ ವಿಷಯ ಇತ್ತೀಚೆಗೆ ಬಹಿರಂಗ ಆಗಿತ್ತು. ಪ್ರೇಮಿಗಳಿಗೆ ಊರಿನ ಹಿರಿಯರು ಬೈದು ಬುದ್ಧಿ ಹೇಳಿದ್ದರಂತೆ.
ಪ್ರಿಯಕರ ಸಚಿನ್ ಗ್ರಾಮದ ಬೀರಪ್ಪ ದೇವರ ದೇವಸ್ಥಾನದ ಪೂಜಾರಿಯಾಗಿದ್ದನು. ಇಂದು ಪ್ರಿಯತಮೆ ಪ್ರತಿಭಾ ಮಡಿವಾಳ ಜೊತೆ ಒಂದೇ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಸದ್ಯ ಪ್ರೇಮಿಗಳ ಪ್ರೀತಿಗೆ ಅಂತರ್ಜಾತಿ ವಿಚಾರ ಅಡ್ಡಿಯಾಯ್ತು ಎಂದು ಮೇಲ್ನೋಟಕ್ಕೆ ಕಂಡಿದೆ. ಪೊಲೀಸರ ತನಿಖೆಯಿಂದಷ್ಟೇ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬರಬೇಕಿದೆ.






