ಇತರೆ

ಪಾರ್ಸಲ್‌ ಬಂದಿರುವ ಹೇರ್ ಡ್ರೈಯರ್ ಬ್ಲಾಸ್ಟ್: ಮಹಿಳೆಯ ಎರಡೂ ಕೈ ಛಿದ್ರ 

Views: 221

ಕನ್ನಡ ಕರಾವಳಿ ಸುದ್ದಿ : ಪಾರ್ಸಲ್‌ ಬಂದಿರುವ ಹೇರ್‌ ಡ್ರೈಯರ್ ಬ್ಲಾಸ್ಟ್ ಆಗಿ ಮಹಿಳೆಯ ಎರಡೂ ಕೈ ಛಿದ್ರ ಛಿದ್ರ ಛಿದ್ರ ಆಗಿರುವ ಭಯಾನಕ ಘಟನೆ ಇಳಕಲ್ ನಗರದಲ್ಲಿ ನಡೆದಿದೆ.

ಎರಡು ಕೈ ಕಟ್ ಆದ ಮಹಿಳೆ ಬಸಮ್ಮ ಯರನಾಳ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಮುಂಗೈ ಹಾಗೂ ಬೆರಳುಗಳು ಛಿದ್ರ, ಛಿದ್ರವಾಗಿ ಮನೆಯಲ್ಲಾ ರಕ್ತ ಚೆಲ್ಲಾಡಿದೆ.

ಬಸಮ್ಮ ಯರನಾಳ ಅವರು ಮೃತ ಯೋಧ ಪಾಪಣ್ಣ ಅವರ ಪತ್ನಿ. 2017ರಲ್ಲಿ ಯೋಧ ಪಾಪಣ್ಣ ಅವರು ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮೃತಪಟ್ಟಿದ್ದರು.

ಇಳಕಲ್ ನಗರದಲ್ಲಿ ನೆಲೆಸಿರುವ ಬಸಮ್ಮ ಅವರಿಗೆ ಶಶಿಕಲಾ ಎಂಬುವರ ಹೆಸರಿನಲ್ಲಿ ಡಿಟಿಡಿಸಿ ಕೊರಿಯರ್‌ನಲ್ಲಿ ಪಾರ್ಸಲ್ ಬಂದಿದೆ. ಶಶಿಕಲಾ ಪತಿ ಕೂಡ ಮೃತ ಯೋಧರು. ಪಾರ್ಸಲ್ ಮೇಲೆ ಶಶಿಕಲಾ ಹೆಸರು ಮೊಬೈಲ್ ನಂಬರ್ ಇತ್ತು. ಕೊರಿಯರ್‌ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು.

ಶಶಿಕಲಾ ಬೇರೆ ಊರಲ್ಲಿ ಇದ್ದ ಕಾರಣ ಬಸಮ್ಮ ಅವರಿಗೆ ಕೊರಿಯರ್ ಪಡೆದು ಓಪನ್ ಮಾಡಲು ಹೇಳಿದ್ದರು. ಪಾರ್ಸಲ್‌ ಓಪನ್ ಮಾಡಿದಾಗ ಅದರಲ್ಲಿ ಹೇರ್ ಡ್ರೈಯರ್ ಇತ್ತು. ಬಸಮ್ಮಳಿಗೆ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ಅಂದಿದ್ದಕ್ಕೆ ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಹೇರ್ ಡ್ರೈಯರ್‌ ಬ್ಲಾಸ್ಟ್ ಆಗಿದೆ. ಬಸಮ್ಮ ಅವರನ್ನ ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೇರ್ ಡ್ರೈಯರ್ ಬ್ಲಾಸ್ಟ್ ಆದ ಮೇಲೆ ಇದನ್ನು ಆರ್ಡರ್ ಮಾಡಿದವರು ಯಾರು? ಯಾರು ಹಣ ಸಂದಾಯ ಮಾಡಿದರು ಎಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೇರ್ ಡ್ರೈಯರ್ ಆಂಧ್ರದ ವಿಶಾಖಪಟ್ಟಣದಿಂದ ಕೊರಿಯರ್ ಮೂಲಕ ಬಾಗಲಕೋಟೆಗೆ ಬಂದಿದೆ. ಆದರೆ ಹೇರ್ ಡ್ರೈಯರ್ ಬ್ಲಾಸ್ಟ್ ಆದ ಮೇಲೆ ಶಶಿಕಲಾ ಅವರು ನಾನು ಆರ್ಡರ್ ಮಾಡೇ ಇಲ್ಲ ಎಂದಿದ್ದಾರೆ. ಆದರೆ ಅವರ ಹೆಸರಲ್ಲಿ ಹೇರ್ ಡ್ರೈಯರ್ ಕೊರಿಯರ್ ಬಂದಿದೆ. ಈ ಬಗ್ಗೆ ಇಳಕಲ್ ಠಾಣೆಯ ಪೊಲೀಸರು ತಜ್ಞರ ತಂಡದಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

Related Articles

Back to top button
error: Content is protected !!