ಸಾಂಸ್ಕೃತಿಕ

ಪತಿ ಜೈಲಿನಿಂದ ಬೇಗನೇ ಹೊರ ಬರಲಿ!.. ಪ್ರತಿಷ್ಠಿತ ದೇವಾಲಯಕ್ಕೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಬೇಟಿ 

Views: 12

ಕನ್ನಡ ಕರಾವಳಿ ಸುದ್ದಿ: ಚಾಲೆಜಿಂಗ್ ಸ್ಟಾರ್‌ ದರ್ಶನ್‌ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದಾರೆ. ಹೀಗಾಗಿ ಪತಿ ಜೈಲಿನಿಂದ ಹೊರ ಬರಲಿ ಎಂದು ವಿಜಯಲಕ್ಷ್ಮಿ ದರ್ಶನ್‌ ದೇವಾಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಸಿಖ್‌ರ ಪ್ರತಿಷ್ಠಿತ ದೇವಾಲಯಕ್ಕೆ ವಿಜಯಲಕ್ಷ್ಮೀ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ.

ದರ್ಶನ್‌ ಜಾಮೀನು ಮೇಲೆ ಹೊರ ಬಂದಿದ್ದರು. ಆದರೆ ಆ ಮೇಲೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ರದ್ದಾದ ಮೇಲೆ ದರ್ಶನ್‌ ಅವರು ಎರಡನೇ ಬಾರಿಗೆ ಜೈಲು ಸೇರಿದರು. ಇಲ್ಲಿಗೆ 9 ತಿಂಗಳು ಕಳೆದಿವೆ. ದರ್ಶನ್‌ ಅವರು ಹೊರಗಡೆ ಬರಲು ಯಾವುದೇ ಪರಿಹಾರ ಸಿಗುತ್ತಿಲ್ಲ.

ಮೊದಲ ಬಾರಿಗೆ ಅರೆಸ್ಟ್‌ ಆದ ಮೇಲೆ ಕಾನೂನು ಹೋರಾಟ ಮತ್ತು ಜಾಮೀನು ಪ್ರಕ್ರಿಯೆಗಳು ಮುಂದುವರೆದವು. ಜಾಮೀನು ಸಿಗುತ್ತಿದ್ದಂತೆ ದರ್ಶನ್‌ ಬಳ್ಳಾರಿ ಜೈಲಿನಿಂದ ಹೊರ ಬಂದು ಡೆವಿಲ್‌ ಮೂವಿ ಶೂಟಿಂಗ್‌ ಮುಗಿಸಿದರು. ಆದರೆ ಡೆವಿಲ್‌ ರಿಲೀಸ್‌ ವೇಳೆಗೆ ದರ್ಶನ್‌ ಜೈಲಿನಲ್ಲಿದ್ದರು.

ಇತ್ತೀಚೆಗೆ ದರ್ಶನ್‌ ಅವರ ಪರವಾಗಿ ಜಾಮೀನು ಅರ್ಜಿಯನ್ನು ವಕೀಲರ ಮೂಲಕ ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಪತಿ ಬೇಗನೇ ಹೊರ ಬರಲಿ ಎಂದು ವಿಜಯಲಕ್ಷ್ಮಿ ಅವರು ಅಮೃತಸರದಲ್ಲಿರುವ ಗೋಲ್ಡನ್‌ ಟೆಂಪಲ್‌ ಗುರುದ್ವಾರಕ್ಕೆ ಭೇಟಿ ಕೊಟ್ಟಿದ್ದಾರೆ.

ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್‌ ಟೆಂಪಲ್‌ಗೆ ವಿಜಯಲಕ್ಷ್ಮಿ ದರ್ಶನ್‌ ಅವರು ಭೇಟಿ ಕೊಟ್ಟು ದೇವರ ದರ್ಶನ ಪಡೆದುಕೊಂಡಿದ್ದಾರೆ. ಈ ಸಂಬಂದ ವಿಜಯಲಕ್ಷ್ಮಿ ಅವರು ದೇವಾಲಯದ ಬಳಿ ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ವಿಜಯಲಕ್ಷ್ಮಿ ದರ್ಶನ್‌ ಅವರು ಗೋಲ್ಡನ್‌ ಟೆಂಪಲ್‌ ಗುರುದ್ವಾರಕ್ಕೆ ಭೇಟಿ ಕೊಟ್ಟಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದಾರೆ. ಇದಕ್ಕೆ ಜೀವನದಲ್ಲಿ ಕೆಲವೊಮ್ಮೆ ಎಲ್ಲವನ್ನು ನಗುತ್ತ ನಿಭಾಯಿಸಲು ಆಗಲ್ಲ. ಅದು ನೀವು ನಂಬಿದ ಮತ್ತು ನಿಮ್ಮ ಜೀವನದುದ್ದಕ್ಕೂ ಆಚರಿಸಿದ ದೇವರು ನಿಮಗೆ ನೀಡಿದ ಶಕ್ತಿ ಎಂದು ಟ್ಯಾಗ್‌ಲೈನ್‌ ಬರೆದಿದ್ದಾರೆ.

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ದರ್ಶನ್‌ ಅಭಿಮಾನಿಗಳು ಇದಕ್ಕೆ ವಿಧ ವಿಧವಾದ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅತ್ತಿಗೆ ಬೇಗ ಅಣ್ಣ ರಿಲೀಸ್‌ ಆಗಲಿ ಎಂದು ನಾವು ಕೇಳಿಕೊಳ್ಳುತ್ತೇವೆ ಎಂದು ಕಾಮೆಂಟ್ಸ್‌ ಮಾಡುತ್ತಿದ್ದಾರೆ.

ದರ್ಶನ್‌ ಅವರನ್ನು ಜೈಲಿನಿಂದ ಹೊರ ತರಲು ವಿಜಯಲಕ್ಷ್ಮಿ ಅವರು ಕಾನೂನಿನ ಪ್ರಕಾರ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ದೇವರ ಅನುಗ್ರಹ ಕೂಡ ಇರಲಿ ಎಂದು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ.

Related Articles

Back to top button
error: Content is protected !!