ಸಾಂಸ್ಕೃತಿಕ
“ನಾ ಬೋರ್ಡು ಇರದ ಬಸ್ಸನು”… ಹಾಡಿಗೆ ಕುಣಿದಿದ್ದ ನಟಿ ಹೃದಯಾಘಾತದಿಂದ ಸಾವು

Views: 180
ಕನ್ನಡ ಕರಾವಳಿ ಸುದ್ದಿ: ಹಿಂದಿ ಬಿಗ್ ಬಾಸ್ ಸೀಜನ್ -13ರ ಸ್ಪರ್ಧಿ, ಖ್ಯಾತ ನಟಿ ಶೆಫಾಲಿ ಜರಿವಾಲ ಹೃದಯಾಘಾತದಿಂದ ನಿಧನರಾಗಿದ್ದಾರೆ.
42 ವರ್ಷದ ಶೆಫಾಲಿ ಜರಿವಾಲ ಮುಂಬೈನ ಅಂಧೇರಿ ಲೋಖಂಡ್ ವಾಲಾದಲ್ಲಿ ವಾಸವಾಗಿದ್ದರು, ತಡರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೆಫಾಲಿ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು. ಕೂಪರ್ ಆಸ್ಪತ್ರೆ ವೈದ್ಯರು ಶೆಫಾಲಿ ಸಾವನ್ನು ದೃಢಪಡಿಸಿದ್ದಾರೆ.
ಶೆಫಾಲಿ ಜರಿವಾಲಾ ನಟ ಪುನೀತ್ ರಾಜ್ ಕುಮಾರ್ ಜೊತೆ ‘ಹುಡುಗರು’ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಅಭಿನಯಿಸಿದ್ದರು. ‘ನಾ ಬೋರ್ಡು ಇರದ ಬಸ್ಸನು….’ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡು ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಜನಪ್ರಿಯವಾಗಿದೆ. ಮುಂಬೈನಲ್ಲಿಯೇ ವಾಸವಾಗಿದ್ದ ಶೆಫಾಲಿ 2004ರಲ್ಲಿ ಹರ್ಮಿತ್ ಸಿಂಗ್ ಅವರನ್ನು ವಿವಾಹವಾಗಿದ್ದರು. ವಿಚ್ಛೇದನದ ಬಳಿಕ 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ವಿವಾಹವಾಗಿದ್ದರು. ಕಾಂತಾ ಲಗಾ ಹಾಡಿನ ಮೂಲಕವೂ ಫೇಮಸ್ ಆಗಿದ್ದರು.