ಸಾಮಾಜಿಕ

ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದಿದ್ದು ನಾನಲ್ಲ.. ನನ್ನ ಗಂಡ..ಭಯಾನಕ ಸತ್ಯ ಬಾಯ್ಬಿಟ್ಟ ತಾಯಿ! 

Views: 169

ಕನ್ನಡ ಕರಾವಳಿ ಸುದ್ದಿ: ಜನ್ಮ ಕೊಟ್ಟ 4 ಮಕ್ಕಳನ್ನು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ತಳ್ಳಿದ್ದು ಈತನೆ. ಮೊದಲಿಗೆ ಈ 4 ಮಕ್ಕಳ ತಾಯಿಯೇ ಕಾಲುವೆಗೆ ತಳ್ಳಿ ತಾನು ಜೀವ ಬಿಡಲು ಯತ್ನಿಸಿದ್ದಾಳೆ ಎನ್ನಲಾಗಿತ್ತು. ಆದರೆ ಈ ಪ್ರಕರಣಕ್ಕೆ ಆಸ್ಪತ್ರೆಗೆ ದಾಖಲಾದ ತಾಯಿ ಭಯಾನಕ ಸತ್ಯ ಬಾಯ್ಬಿಟ್ಟಿದ್ದಾಳೆ.

ಕಾಲುವೆಗೆ ಬಿದ್ದ ನಾಲ್ಕು ಮಕ್ಕಳು ಜಲಸಮಾಧಿಯಾಗಿದ್ದು, ಸ್ಥಳೀಯರು ತಾಯಿ ಭಾಗ್ಯ ಭಜಂತ್ರಿಯನ್ನ ರಕ್ಷಿಸಿದ್ದಾರೆ.

ಆಸ್ತಿ ವಿಚಾರ ಗಲಾಟೆ 4 ಮಕ್ಕಳ ಸಾವಲ್ಲಿ ಅಂತ್ಯ!

ಲಿಂರಾಜನ ತಂದೆ ಆಸ್ತಿ ವಿಷಯಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ಲಿಂಗರಾಜ್ ಕುಟುಂಬದವರು ಆಸ್ತಿ ಕೊಡಲ್ಲ ಮನೆ ಬಿಟ್ಟು ಹೊರಗೆ ಹಾಕ್ತೀವಿ ಎಂದಿದ್ದರಂತೆ. ಇದರಿಂದ ಲಿಂಗರಾಜ್ ಮತ್ತು ಭಾಗ್ಯ ದಂಪತಿ ನೊಂದಿದ್ದರು. ವಿಜಯಪುರದ ತೆಲಗಿ ಗ್ರಾಮದಲ್ಲಿ ಗಲಾಟೆ ಆಗಿತ್ತು. 30 ಲಕ್ಷ ಸಾಲ ಮಾಡಿಕೊಂಡಿದ್ದ ಲಿಂಗರಾಜು ಮಕ್ಕಳು, ಪತ್ನಿ ಜೊತೆ ವಿಷ ಕುಡಿದು ಕಾಲುವೆಗೆ ಹಾರಿ ಪ್ರಾಣ ಬಿಡಲು ನಿರ್ಧಾರ ಮಾಡಿದ್ದನಂತೆ.

ಸ್ಥಳೀಯರಿಂದ ರಕ್ಷಣೆಯಾದ ತಾಯಿ ಹೇಳಿದ್ದೇನು?

ಸ್ಥಳೀಯರಿಂದ ರಕ್ಷಣೆಯಾದ ತಾಯಿ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಭಾಗ್ಯಶ್ರೀ ಹೇಳಿಕೆ ನೀಡಿದ್ದು, ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದಿದ್ದು ನಾನಲ್ಲ. ನನ್ನ ಗಂಡ ಎಂದು ಘಟನೆಯ ಅಸಲಿ ವಿಷಯ‌ ಹೊರಹಾಕಿದ್ದಾರೆ.

ನನ್ನ ಪತಿ ಸುಮಾರು 30 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಪರದಾಡಿದ್ದು ಅದಕ್ಕಾಗಿ ಆಸ್ತಿ ಕೇಳಿದ. ಆಸ್ತಿ ಕೊಡದ ವಿಚಾರವಾಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆವು.

ಲಿಂಗರಾಜು ತಂದೆ ಆಸ್ತಿ ಕೊಟ್ಟಿದ್ದರೆ ಜಮೀನು ಮಾರಾಟ ಮಾಡಿ ಸಾಲ ಪಾವತಿ ಮಾಡಲು ನಿರ್ಧಾರ ಮಾಡಿದ್ದೆವು. ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ವಿಷದ ಬಾಟಲಿಯನ್ನು ನನ್ನ ಪತಿ ತಂದಿಟ್ಟಿದ್ದ. ಇಂದು ನಾಲ್ಕು ಮಕ್ಕಳನ್ನು ಕರೆದುಕೊಂಡು ಯಲ್ಲಮ್ಮನ ಬೂದಿಹಾಳಕ್ಕೆ ಹೋಗುವುದಾಗಿ ಮನೆಯಿಂದ ಹೊರ ಬಂದಿದ್ದೆವು.

ಮನೆಯಿಂದ ಹೊರಗಡೆ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ನನ್ನ ಪತಿ ಮಾಡಿದ್ದ. ಇಬ್ಬರು ಮಕ್ಕಳಿಗೆ ಸ್ವಲ್ಪ, ಸ್ವಲ್ಪ ವಿಷ ಕುಡಿಸಿದ್ದ. ನಂತರ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ನನ್ನನ್ನು ಕಾಲುವೆಯಲ್ಲಿ ದೂಡಿ ಅಲ್ಲಿಂದ ಹೋಗಿಬಿಟ್ಟ ಎಂದು ಸಂಬಂಧಿಕರ ಎದುರು ಭಾಗ್ಯಶ್ರೀ ಭಯಾನಕ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಭಾಗ್ಯಶ್ರೀ ಈ ಹೇಳಿಕೆಯನ್ನ ಸಂಬಂಧಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

Related Articles

Back to top button
error: Content is protected !!