ನಟ ವಿಜಯ್ ರಾಘವೇಂದ್ರ ಎರಡನೇ ಮದುವೆ ಬಗ್ಗೆ ತಂದೆ ಚಿನ್ನೇಗೌಡ್ರು ಹೇಳಿದ್ದೇನು?
Views: 192
ಕನ್ನಡ ಕರಾವಳಿ ಸುದ್ದಿ: ಕನ್ನಡ ನಟ ವಿಜಯ್ ರಾಘವೇಂದ್ರ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಆದರೆ, 2ನೇ ಮದುವೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಕಳೆದ ವರ್ಷ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದರು. ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ಅದೇ ಕೊನೆಯುಸಿರೆಳೆದಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿರಲಿಲ್ಲ. ಪತ್ನಿ ಅಗಲಿಕೆ ನೋವಿನಲ್ಲೇ ವಿಜಯ್ ಕಾಲ ಕಳೆಯುತ್ತಿದ್ದಾರೆ. 2ನೇ ಮದುವೆ ಮಾತೇ ಇಲ್ಲ ಎನ್ನುತ್ತಿದ್ದಾರೆ.

ವಿಜಯ್ ರಾಘವೇಂದ್ರಗೆ 2ನೇ ಮದುವೆ ಆಗುವಂತೆ ನಾನು, ಅವರ ಮಾವ ಶಿವರಾಮ್ ಹಾಗೂ ಅವರ ಪತ್ನಿ ಕೂಡ ಹೇಳಿದ್ದೇವೆ. ಆದರೆ ಅವನು ಒಪ್ಪುತ್ತಿಲ್ಲ ಎಂದು ಚಿನ್ನೇಗೌಡ್ರು ಹೇಳಿದ್ದಾರೆ. ಟಿವಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ರಾಘ, ಮುರಳಿ ರೀತಿಯ ಮಕ್ಕಳನ್ನು ಪಡೆದ ನಾನೇ ಧನ್ಯ. “ಇಂತಹ ಮಕ್ಕಳನ್ನು ಪಡೆದ ಹೆಮ್ಮೆ ನನಗಿದೆ. ಆದರೆ ಎಲ್ಲದರ ನಡುವೆ ಕೆಟ್ಟ ಕನಸಿನಂತೆ ವಿಜಯ್ ರಾಘವೇಂದ್ರ ಪತ್ನಿ ಅಲ್ಪ ಕಾಲದಲ್ಲೇ ಹೋಗಿಬಿಟ್ರು. ಆ ಬಳಿಕ ಕೂಡ ಮನವಹಿಸಲು ಎಷ್ಟೋ ಪ್ರಯತ್ನ ಮಾಡ್ದೆ. ಒಪ್ಪುತ್ತಿಲ್ಲ, ಅವನ ಮಗ ಪಿಯುಸಿ ಓದುತ್ತಿದ್ದಾನೆ” ಎಂದು ಚಿನ್ನೇಗೌಡ್ರು ಹೇಳಿದ್ದಾರೆ.

ಮಾತು ಮುಂದುವರೆಸಿರುವ ಚಿನ್ನೇಗೌಡ್ರು “ಈಗಲೂ ತಾನಾಯ್ತು ತನ್ನ ಕೆಲ್ಸ ಆಯ್ತು ಅಂತ ವಿಜಯ್ ಇದ್ದಾನೆ. ಹಗಳಿರುಳು ಕೆಲ್ಸ ಮಾಡ್ತಾನೆ. ಏನೇ ಇದ್ದರೂ ಹೆತ್ತಕರುಳು, ನೋಡಿದಾಗ ಯಾಕೆ ಹಿಂಗೆ ಆಗೋಯ್ತು ಅವನ ಪತ್ನಿ ತೀರಿಹೋದ್ಲು. ಮುಂದೆ ಹೆಂಗೆ ಅನ್ನಿಸುತ್ತೆ. ರಾಘು ಮಾವ ಶಿವರಾಮ್, ಅತ್ತೆ ಕೂಡ ಎಷ್ಟೋ ಹೇಳ್ತಾರೆ. ಇನ್ನೊಂದು ಮದುವೆ ಮಾಡ್ಕೊ ಅಂತ. ಆದರೆ ಅವ್ನು ಮಾತ್ರ ಆ ಜಾಗಕ್ಕೆ ತುಂಬಲು ಸಾಧ್ಯವಿಲ್ಲ ಎನ್ನುತ್ತಾನೆ. 2ನೇ ಮದುವೆ ಬೇಡ ಅಂತ ಒಬ್ಬೊಂಟಿಯಾಗಿದ್ದಾನೆ” ಎಂದು ವಿವರಿಸಿದ್ದಾರೆ.






