ಕರಾವಳಿ

ಧರ್ಮಸ್ಥಳ ಪ್ರಕರಣ: ನಾಳೆ (ಸೆ.25) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ನ್ಯಾಯ ಸಮಾವೇಶ’

Views: 92

ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೆಪ್ಟೆಂಬರ್ 25ರಂದು ‘ನ್ಯಾಯ ಸಮಾವೇಶ’ ಆಯೋಜಿಸಲಾಗಿದೆ. ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ನೂರಾರು ಅಸಹಜ ಸಾವು, ಅತ್ಯಾಚಾರ, ಕೊಲೆ ಮತ್ತು ನಾಪತ್ತೆ ಪ್ರಕರಣಗಳಿಗೆ ನ್ಯಾಯ ಒದಗಿಸಲು ಈ ಸಮಾವೇಶವು ಒತ್ತಾಯಿಸಲಿದೆ.

‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ಯು ಕರ್ನಾಟಕದ ಪ್ರಗತಿಪರ ಸಂಘಟನೆಗಳಾದ ಎಡಪಕ್ಷಗಳು, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಜಂಟಿ ಸಹಯೋಗದಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಮಾವೇಶವು ಅಂದು ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗಲಿದ್ದು, ರಾಷ್ಟ್ರ ಮತ್ತು ರಾಜ್ಯದ ಹಲವು ಚಿಂತಕರು, ಹೋರಾಟಗಾರರು, ಮತ್ತು ಸಾಹಿತಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಸಮಾವೇಶದ ಪ್ರಮುಖ ಹಕ್ಕೊತ್ತಾಯಗಳು

ನಿರ್ದಿಷ್ಟ ಪ್ರಕರಣಗಳ ಮರು ತನಿಖೆ ಮತ್ತು ಎಸ್ಐಟಿ ರಚನೆ

ಪದ್ಮಲತಾ ಪ್ರಕರಣ, ವೇದವಲ್ಲಿ ಸಾವು,  ನಾರಾಯಣ ಮಾವುತ ಮತ್ತು ಸಹೋದರಿ ಕೊಲೆ, ಸೌಜನ್ಯ ಪ್ರಕರಣ

ಈ ಎಲ್ಲಾ ಪ್ರಕರಣಗಳು ಸೇರಿದಂತೆ ಧರ್ಮಸ್ಥಳ ವ್ಯಾಪ್ತಿಯಲ್ಲಿ ದಾಖಲಾದ ಎಲ್ಲಾ ಅಸಹಜ ಸಾವು, ಅತ್ಯಾಚಾರ, ಮತ್ತು ಕೊಲೆ ಪ್ರಕರಣಗಳನ್ನು ಎಸ್ಐಟಿ (SIT) ತನಿಖೆಗೆ ಒಳಪಡಿಸಲು ಒತ್ತಾಯಿಸಲಾಗುವುದು. ಒಂದು ವೇಳೆ ಎಸ್ಐಟಿ ವ್ಯಾಪ್ತಿಗೆ ತರಲು ಸಾಧ್ಯವಾಗದಿದ್ದರೆ, ಈ ಎಲ್ಲಾ ಹಳೆಯ ಮತ್ತು ಗಂಭೀರ ಪ್ರಕರಣಗಳ ತನಿಖೆಗಾಗಿ ಪ್ರತ್ಯೇಕ ವಿಶೇಷ ತನಿಖಾ ತಂಡ ರಚಿಸಬೇಕೆಂದು ಆಗ್ರಹಿಸಲಾಗುವುದು.

Related Articles

Back to top button