ಕರಾವಳಿ

ಧರ್ಮಸ್ಥಳದ ಒಟ್ಟಿಗೆ ಇಡೀ ದೇಶ ಅಲ್ಲ, ಜಗತ್ತೇ ಇದೆ: ಜನಾರ್ದನ ಪೂಜಾರಿ

Views: 143

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಬಗ್ಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಮೌನ ಮುರಿದಿದ್ದಾರೆ. ಧರ್ಮಸ್ಥಳದ ಒಟ್ಟಿಗೆ ಇಡೀ ದೇಶ ಅಲ್ಲ, ಜಗತ್ತೇ ಇದೆ ಎಂಬುದಾಗಿ ಹೇಳಿದ್ದಾರೆ.

ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟು ಉಳ್ಳಾಲ ಇದರ 28ನೇ ವರ್ಷದ ಮುದ್ದು ಕೃಷ್ಣ 2025 ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳದ ವಠಾರವನ್ನು ಎಸ್‌.ಐ.ಟಿಯವರು ಅಗೆಯುತ್ತಿದ್ದಾರೆ. ಶವಗಳನ್ನು ಹೂತು ಇಟ್ಟಿದ್ದಾರೆ ಎಂಬ ಆರೋಪದಲ್ಲಿ ಆ ಶವಗಳನ್ನು ಹುಡುಕುತ್ತಿದ್ದಾರೆ. ಧರ್ಮಸ್ಥಳ ಅದು ಧರ್ಮ ಸದನ. ಒಂದು ಸಮಾಜಕ್ಕೆ ಮಾತ್ರ ಸೇರಿದ್ದಲ್ಲ, ಜಗತ್ತಿಗೇ ಧರ್ಮಸ್ಥಳ ಒಂದು ಹೆಮ್ಮೆಯ ಸ್ಥಳ. ಧರ್ಮಸ್ಥಳವನ್ನು ಹಾಳುಮಾಡ್ಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಯಮನಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಧರ್ಮಸ್ಥಳ: ಇಂದು ಶೋಧ ಮುಂದುವರಿಕೆ?

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗಸ್ಟ್ 10ರಂದು ಯಾವುದೇ ಕಾರ್ಯಾಚರಣೆ ನಡೆದಿಲ್ಲ. ಅನಾಮಿಕ ಸೋಮವಾರ ಹೊಸ ಸ್ಥಳ ಗುರುತಿಸುವ ಸಾಧ್ಯತೆಗಳಿವೆ. ಆದರೆ ಎಷ್ಟು ಸ್ಥಳ ‘ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆ. 9ರಂದು ಬಾಹುಬಲಿ ಬೆಟ್ಟದ ಸಮೀಪದ ಅರಣ್ಯದಲ್ಲಿ 16 ಮತ್ತು 16-ಎ ಗುರುತು ಮಾಡಿದ 2 ಜಾಗದಲ್ಲಿ ಕಾರ್ಯಚರಣೆ ನಡೆದಿತ್ತು. ಈತ್ಮಧ್ಯೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ತೆರಳಿ ದಿ| ಪದ್ಮಲತಾಳ ಮರು ತನಿಖೆಗೆ ಪದ್ಮಲತಾ ಅಕ್ಕನಿಂದ ಎಸ್‌ಐಟಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Related Articles

Back to top button
error: Content is protected !!