ಕರಾವಳಿ

ದುಬೈ ಉದ್ಯಮಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಇವರಿಂದ ಏತ ನೀರಾವರಿ ಯೋಜನೆಗೆ ಚಾಲನೆ  

ವಕ್ವಾಡಿಗೆ ಹರಿದು ಬಂತು ವಾರಾಹಿ ನೀರು

Views: 12

ಕುಂದಾಪುರ : ಸಹಬಾಳ್ವೆ, ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಎನನ್ನು ಬೇಕಾದರೂ ಸಾಧಿಸಬಹುದು. ಆ ನಿಟ್ಟಿನಲ್ಲಿ ವಕ್ವಾಡಿ ತೆಂಕಬೆಟ್ಟು ಪರಿಸರದವರು ಏತ ನೀರಾವರಿ ಮೂಲಕ ಪ್ರತೀ ಮನೆ ಮನೆಗೂ ಹರಿಯುವ ಯೋಜನೆಯ ಪ್ರಯತ್ನಕ್ಕೆ ಸಂತೋಷ ವ್ಯಕ್ತಪಡಿಸಿದರು. ಈ ಮಹತ್ವ ಪೂಣ೯ ಯೋಜನೆಗೆ ಬೆಂಬಲಿಸಿ, ವಕ್ವಾಡಿಯ ಸಮಗ್ರ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

ಅವರು ಎ. 25 ರಂದು ದೇವರಾಡಿ  ಶ್ರೀ  ಬ್ರಹ್ಮಲಿಂಗೇಶ್ವರ ಹಾಗೂ ಸಪರಿವಾರ  ಚಿಕ್ಕು ದೇವಸ್ಥಾನದಲ್ಲಿ ನಡೆದ  ಏತ ನೀರಾವರಿ ಯೋಜನೆಯಿಂದ ನೀರು ತುಂಬಿದ ಇಂಗು ಗುಂಡಿಗೆ ಬಾಗಿನ ಅಪಿ೯ಸಿ, ನಂತರ ದೀಪ ಪ್ರಜ್ವಲಿಸುವುದರ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.

ವಕ್ವಾಡಿ ಬೃಹ್ಮಲಿಂಗೇಶ್ವರ ಚಿಕ್ಕಮ್ಮ ಸಪರಿವಾರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜನ್ಸಾಲಿ ಶಿವರಾಮ್ ಶೆಟ್ಟಿ, ಆಡಳಿತ ಮೊಕ್ತೇಸರ ಹೆಬ್ಬಾಗಿಲುಮನೆ ಭಾಲಕೃಷ್ಣ ಶೆಟ್ಟಿ, ದುಬೈ ಉದ್ಯಮಿ ದ್ಯಾಗಳ ಮನೆ ದಿನಕರ ಶೆಟ್ಟಿ, ಪುರಾಣಿಬೈಲು ಸೀತಾರಾಮ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಸುಧಾಕರ ವಕ್ವಾಡಿ ಸ್ವಾಗತಿಸಿ, ನಿರೂಪಿಸಿದರು. ಉದಯ ಕುಮಾರ ಶೆಟ್ಟಿ ಅವರು ಯೋಜನೆಗೆ ಸಹಕರಿಸಿದವರ ಪಟ್ಟಿ ವಾಚಿಸಿದರು. ಶ್ರೀಮತಿ ಶಮಿತ್ ಶೆಟ್ಟಿ ವಂದಿಸಿದರು.

Related Articles

Back to top button
error: Content is protected !!