ತ್ರಿಕೋನ ಪ್ರೇಮ:ಕೊಲೆಯಲ್ಲಿ ಅಂತ್ಯವಾದ ಯುವತಿ
Views: 39
ಕನ್ನಡ ಕರಾವಳಿ ಸುದ್ದಿ: ತ್ರಿಕೋನ ಪ್ರೇಮ ಕತೆಯಲ್ಲಿ ಯುವತಿಯೊಬ್ಬಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮುಂಬೈನಲ್ಲಿ ಸಂಭವಿಸಿದೆ
ಕೊಲೆಯಾದ ಯುವತಿಯನ್ನು ಶಿಫಾ ಶೇಖ್ (19) ಎಂದು ಗುರುತಿಸಲಾಗಿದೆ. ಈಕೆಯನ್ನು ಶಿವಾಜಿ ನಗರ ಏರಿಯಾದ ಫುರ್ಖಾನಿಯಾ ಮಸೀದಿ ಬಳಿ ತಲೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಈ ಘಟನೆ ನಡೆದ ಕೇವಲ 12 ಗಂಟೆಯ ಒಳಗೆ ಮುಂಬೈ ಪೊಲೀಸರು, 25 ವರ್ಷದ ಯುವತಿ ಮತ್ತು 23 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಅಂದ ಹಾಗೆ, ಪ್ರಾಥಮಿಕ ತನಿಖೆಯ ಪ್ರಕಾರ, ಶಿಫಾಗೂ ಮತ್ತು 25 ವರ್ಷದ ಯುವತಿಗೂ 23 ವರ್ಷದ ಯುವಕನ ಮೇಲೆ ಲವ್ ಇತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಅಂದಹಾಗೆ, ಈ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಪೊಲೀಸರ ಪ್ರಕಾರ, ಶಿವಾಜಿ ನಗರ ಏರಿಯಾದ ಮತ್ತೊಬ್ಬ ಮಹಿಳೆಯನ್ನು ಭೇಟಿಯಾಗಲು ಆಕೆಯ ಕರೆ ಬಂದ ನಂತರ ಶಿಫಾ ತನ್ನ ಮನೆಯಿಂದ ಹೊರಟಳು. ಫುರ್ಖಾನಿಯಾ ಮಸೀದಿ ತಲುಪುತ್ತಿದ್ದಂತೆ ಆ ಸ್ಥಳದಲ್ಲಿ ಒಂದು ಮೀಟಿಂಗ್ ನಡೆಯಿತು. ಶಿಫಾ ಮತ್ತು ಶಂಕಿತನ ನಡುವೆ ಯಾವುದೋ ಒಂದು ವಿಷಯದ ಬಗ್ಗೆ ತೀವ್ರ ವಾಗ್ವಾದ ನಡೆಯಿತು.
ಇದೇ ವೇಳೆ ಶಿಫಾ ಅವರ ಮುಖಕ್ಕೆ 25 ವರ್ಷದ ಮಹಿಳೆ ನೇರವಾಗಿ ಗುಂಡಿಕ್ಕಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಗುಂಡು ಆಕೆಯ ಕೆನ್ನೆಯ ಮೂಲಕ ಹೋಗಿ ತಲೆಬುರುಡೆಗೆ ತಗುಲಿ ಮಾರಕ ಗಾಯಗಳಾದವು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಫಾಳನ್ನು ನೋಡಿ ಸ್ಥಳೀಯರು ಕೂಡಲೇ ಆಕೆಯನ್ನು ಘಾಟ್ರೋಪರ್‌ನ ರಾಜವಾಡಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.






