ಇತರೆ

ತೆಕ್ಕಟ್ಟೆ: ಪತಿ, ಪುತ್ರನ ಅಗಲಿಕೆಯಿಂದ ತೀವ್ರವಾಗಿ ಮನನೊಂದ ಮಹಿಳೆ ಆತ್ಮಹತ್ಯೆ

Views: 331

ಕನ್ನಡ ಕರಾವಳಿ ಸುದ್ದಿ: ಮೇ 15ರಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ, ರಕ್ಷಣೆಗೆ ಧಾವಿಸಿದ ಮಗ ಸಾವನಪ್ಪಿದ್ದು, ಇಬ್ಬರ ಅಗಲಿಕೆಯ ನೋವಿನಿಂದ ಮನನೊಂದ ಮಹಿಳೆಯೊಬ್ಬರು ವಿಷಪ್ರಾಶನ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಅ. 7ರಂದು ತೆಕ್ಕಟ್ಟೆಯಲ್ಲಿ ನಡೆದಿದೆ. ಮೃತಪಟ್ಟವರು ತಾರಾ ದೇವಾಡಿಗ (55)

ತೆಕ್ಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ಪತಿ ಹಾಗೂ ಪುತ್ರನೊಂದಿಗೆ ತಾರಾ ವಾಸವಾಗಿದ್ದರು. ಮೇ 15ರಂದು ಮನೆಗೆ ಆಧಾರವಾಗಿದ್ದ ಪತಿ ಮಾಧವ ದೇವಾಡಿಗ (60) ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ರಕ್ಷಣೆಗೆ ಧಾವಿಸಿದ ಮಗ ಪ್ರಸಾದ್ ದೇವಾಡಿಗ -(23) ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಈ ಸಂದರ್ಭದಲ್ಲಿ ಪತಿ ಹಾಗೂ ಮಗನನ್ನು ರಕ್ಷಿಸಲು ಬಾವಿಗೆ ಹಾರಿದ ತಾರಾ ದೇವಾಡಿಗ ಅದೃಷ್ಟಾವತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಪತಿ ಮತ್ತು ಪುತ್ರನ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಅವರು ಸುಮಾರು ಐದು ತಿಂಗಳ ಬಳಿಕ ತೆಕ್ಕಟ್ಟೆ ಗ್ರಾಮ ಪಂಚಾಯತ್ ಕಚೇರಿಯ ಸಮೀಪ ವಾಸವಾಗಿದ್ದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Related Articles

Back to top button
error: Content is protected !!