ತೆಂಡೂಲ್ಕರ್ ದಾಖಲೆ ಮುರಿದು ಶತಕಗಳ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

Views: 0
ಮುಂಬಯಿ : ಆಧನಿಕ ಕ್ರಿಕೆಟ್ನ ಸರ್ವಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆ ಮುರಿದ್ದಾರೆ. ಅವರೀಗ ಏಕ ದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಅವರು ತಮ್ಮ 50ನೇ ಶತಕ ಬಾರಿಸಿದ್ದಾರೆ. ವಿಶ್ವ ಕಪ್ ಟೂರ್ನಿಯಲ್ಲೇ ಅವರು ಸಚಿನ್ ದಾಖಲೆಯ ಮುರಿದು ಗರಿಷ್ಠ ಏಕದಿನ ಶತಕಗಳ ದಾಖಲೆ ಬರೆದ ಅವರು ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದರು.
ವಿರಾಟ್ ಕೊಹ್ಲಿ ಹಾಲಿ ಅವೃತ್ತಿಯ ಲೀಗ್ ಹಂತದಲ್ಲಿ ಸಚಿನ್ ಅವರ 49ನೇ ಶತಕದ ದಾಖಲೆಯನ್ನು ಮುರಿದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆ ಶತಕ ಬಾರಿಸಿದ್ದರು. ಆ ಪಂದ್ಯ ಕೋಲ್ಕೊತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ಆ ಪಂದ್ಯ ನಡೆದಿತ್ತು
ಅಂದ ಹಾಗೆ ವಿರಾಟ್ ಕೊಹ್ಲಿ ಸಚಿನ್ ಅವರ ತವರು ಮೈದಾನ ಮುಂಂಬಯಿಯ ವಾಂಖೆಡೆಯಲ್ಲೇ ರೆಕಾರ್ಡ್ ಮುರಿದಿರುವುದು ಕಾಕತಾಳಿಯ. ಅಪ್ಪಟ ಕ್ರಿಕೆಟ್ ಪ್ರೇಮಿಗಳ ನಾಡು ಮುಂಬಯಿಯಲ್ಲಿ ದಾಖಲೆ ಮುರಿದಿರುವುದು ಇನ್ನೊಂದು ವಿಶೇಷ ಸಂಗತಿ. ದಾಖಲೆ ಮುರಿದ ತಕ್ಷಣ ವಿರಾಟ್ ಗ್ಯಾಲರಿಯಲ್ಲಿದ್ದ ಸಚಿನ್ ತೆಂಡೂಲ್ಕರ್ ಅವರಿಗೆ ತಲೆಬಾಗಿ ನಮಿಸಿದರು. ಇಡೀ ಮೈದಾನನವೇ ಅವರಿಗೆ ಎದ್ದು ನಿಂತು ಚಪ್ಪಾಳೆ ಹೊಡೆಯಿತು. ಪತ್ನಿ ಅನುಷ್ಕಾ ಫ್ಲೈಯಿಂಗ್ ಕಿಸ್ ಕೊಟ್ಟರು. ಫುಟ್ಬಾಲ್ ದಂತಕತೆ ಡೇವಿಡ್ ಬೇಕ್ಹಮ್ ಸೇರಿದಂತೆ ಎಲ್ಲರೂ ಶಹಬ್ಬಾಸ್ಗಿರಿಕೊಟ್ಟರು.
ಅತಿ ಹೆಚ್ಚು ಏಕದಿನ ಶತಕಗಳು
50- ವಿರಾಟ್ ಕೊಹ್ಲಿ
49 – ಸಚಿನ್ ತೆಂಡೂಲ್ಕರ್
31- ರೋಹಿತ್ ಶರ್ಮಾ
30 – ರಿಕಿ ಪಾಂಟಿಂಗ್
28 – ಸನತ್ ಜಯಸೂರ್ಯ
ವಿರಾಟ್ ಕೊಹ್ಲಿಯ ಖಾತೆಯಲ್ಲೀಗ ಒಟ್ಟು 80 ಶತಕಗಳಿವೆ. 50 ಏಕದಿನ, 29 ಟೆಸ್ಟ್ ಹಾಗೂ 1 ಟಿ20 ಶತಕಗಳಿವೆ.
ಅರ್ಧ ಶತಕಗಳ ದಾಖಲೆ
ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತೆಂಡೂಲ್ಕರ್ ಅವರ ವಿಶ್ವ ಕಪ್ನಲ್ಲಿ ಸೃಷ್ಟಿಸಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ಅವರೀಗ ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಈ ಹಾದಿಯಲ್ಲಿ ಅವರು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.







