ಕರಾವಳಿ

ತಾತ್ಕಾಲಿಕ ರದ್ದಾಗಿದ್ದ ಬೆಂಗಳೂರು-ಮಂಗಳೂರು-ಕಾರವಾರ ಹಗಲು ರೈಲುಗಳು ಪುನಾರಂಭ

Views: 56

ಕನ್ನಡ ಕರಾವಳಿ ಸುದ್ದಿ: ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟಿ ವಿಭಾಗದಲ್ಲಿ ರೈಲ್ವೇ ವಿದ್ಯುದ್ದೀಕರಣದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರದ್ದಾಗಿದ್ದ ಮೂರು ರೈಲುಗಳ ಸಂಚಾರ ಡಿ. 16, 17 ಮತ್ತು 20ರಿಂದ ಪುನರಾರಂಭಗೊಳ್ಳಲಿದೆ.

ಯಶವಂತಪುರ ಜಂಕ್ಷನ್ -ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್‌ ಟ್ರೈ ವೀಕ್ಲಿ ಡಿ.16ರಿಂದ, ಯಶವಂತಪುರ ಜಂಕ್ಷನ್‌-ಕಾರವಾರ ಟೈ ವೀಕ್ಲಿಡಿ.17ರಿಂದ ಹಾಗೂ ಯಶವಂತಪುರ ಜಂಕ್ಷನ್- ಮಂಗಳೂರು ಜಂಕ್ಷನ್ ವೀಕ್ಲಿ ಎಕ್ಸ್‌ಪ್ರೆಸ್‌ ಡಿ.20ರಿಂದ ಆರಂಭಗೊಳ್ಳಲಿದ್ದು ಬುಕಿಂಗ್ ಆರಂಭಗೊಂಡಿದೆ.

ವಿದ್ಯುದ್ದೀಕರಣ ಹಿನ್ನೆಲೆಯಲ್ಲಿ ಮೇ 31ರಿಂದ ಈ ರೈಲುಗಳ ಸಂಚಾರ ಸ್ಥಗಿತ ಗೊಂಡಿತ್ತು. ನಿಗದಿಯಂತೆ ನ. 1ರಂದು ಪುನರಾರಂಭಗೊಳ್ಳಬೇಕಿತ್ತು.

Related Articles

Back to top button
error: Content is protected !!