ಸಾಂಸ್ಕೃತಿಕ
ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಜಾನಪದ ಆಕಾಡೆಮಿ ಕರ್ನಾಟಕ ಸರಕಾರದ 2024-25 ಸಾಲಿನ ವಾರ್ಷಿಕ ಗೌರವ ರಾಜ್ಯ ಪ್ರಶಸ್ತಿ

Views: 26
ಕನ್ನಡ ಕರಾವಳಿ ಸುದ್ದಿ: ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಜಾನಪದ ಆಕಾಡೆಮಿ ಕರ್ನಾಟಕ ಸರಕಾರದ 2024-2025 ಸಾಲಿನ ವಾರ್ಷಿಕ ಗೌರವ ರಾಜ್ಯ ಪ್ರಶಸ್ತಿಯನ್ನು ದಿನಾಂಕ:15/03/2025 ರಂದು ಬೀದರ್ ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಾಡಲಾಯಿತು.
ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಸರಕಾರ ಇವರ 2024/2025 ನೆಯ ಸಾಲಿನ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನು, ನನ್ನ 32 ವರ್ಷದ ಜಾನಪದ ಸಂಗಿತ ಕ್ಷೇತ್ರದ ಸೇವೆಯನ್ನು ಗುರುತಿಸಿ ದಿನಾಂಕ: 15/03/2025 ರಂದು ಬೀದರ್ ಜಿಲ್ಲೆಯ ಶ್ರೀ ಬಸವೇಶ್ವರ ಪಟ್ಟದ ದೇವರು ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಕರ್ನಾಟಕ ಜಾನಪದ ಅಕಾಡೆಮಿ, ಇದರ ಅಧ್ಯಕ್ಷರಾದ ಸನ್ಮಾನ್ಯ ಗೊಲ್ಲಳ್ಳಿ ಶಿವಪ್ರಕಾಶ್ ಅವರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟರ್ ಶ್ರೀಮತಿ ನಮ್ರತಾ ಅವರು, ಗಣ್ಯ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರದಾನಮಾಡಲಾಯಿತುಮತ್ತು ಅಕಾಡಮಿಯ ಸದಸ್ಯರು ಉಪಸ್ಥಿತರಿದ್ದರು.