ಕರಾವಳಿ
ಜೂನ್ ಮೊದಲ ವಾರ ರಾಜ್ಯಕ್ಕೆ ಮುಂಗಾರು

Views: 0
ಜೂನ್ ಮೊದಲ ವಾರ ದಲ್ಲಿ ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸಲಿದೆ, 3-4 ದಿನಗಳಲ್ಲಿ ಮುಂಗಾರು ಕನಾ೯ಟಕಕ್ಕೆ ಪ್ರವೇಶಿಸಲಿದೆ ಎಂದು ಬಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಡಿಕೆಯಂತೆ ಮಳೆ ಒಂದು ವಾರ ಏರುಪೇರಾಗುವ ಸಾಧ್ಯತೆ ಇದೆ. ಕಳೆದ ವಾರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಕಲವಡೆ ಭಾರಿ ಮಳೆಯಾಗಿತ್ತು. ಬಂಗಾಳ ಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ಮೋಚಾ ಚಂಡಮಾರುತ ರೂಪುಗೊಂಡಿತ್ತು. ಬಳಿಕ ಉತ್ತರದ ಕಡೆ ಚಲಿಸಿತ್ತು. ಬಾಂಗ್ಲಾದೇಶ ಕರಾವಳಿ ಭಾಗ ತಲುಪುವಷ್ಟರಲ್ಲಿ ಮೋಚಾ ಚಂಡ ಮಾರುತ ಕ್ಷೀಣತೆ ಕಂಡಿದೆ. ಮೋಚಾ ಚಂಡ ಮಾರುತ ಪರಿಣಾಮದಿಂದ ಈ ಭಾರಿ ಭಾರತದಲ್ಲಿ ಮುಂಗಾರು ನಿರೀಕ್ಷಿತ ಸಮಯದಲ್ಲಿ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.







