ಕ್ರೀಡೆ

ಜನ್ಮದಿನವೇ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

Views: 0

ಇಂದು ಕೋಲ್ಕತ್ತದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನ ಕೊಹ್ಲಿ ಮಯವಾಗಿತ್ತು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಅವರು ಸೊಗಸಾದ ಪ್ರದರ್ಶನ ನೀಡಿ ಸೆಂಚುರಿ ಸಿಡಿಸಿದರು.

ಅಭಿಮಾನಿಗಳು ಕಿಂಗ್ ಕೊಹ್ಲಿ ಅವರ ಆಟವನ್ನು ಕಣ್ತುಂಬಿಕೊಂಡು ಖುಷಿ ವ್ಯಕ್ತಪಡಿಸಿದರು.

121 ಬೌಲ್ ಆಡಿ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಒಟ್ಟು 49 ಶತಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ನಾಟ್ ಔಟ್ ಆಗದೇ ಉಳಿದಿದ್ದು ವಿಶೇಷವಾಗಿತ್ತು. ಇಂದು ಅವರ ಜನ್ಮದಿನವಿದ್ದಿದ್ದು ಇನ್ನೊಂದು ವಿಶೇಷ.

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿಶ ಒಟ್ಟು 277 ಇನ್ನಿಂಗ್ಸ್ ಗಳನ್ನು ಆಡಿ ಈ ದಾಖಲೆ ನಿರ್ಮಿಸಿದರು. ಸಚಿನ್ ತೆಂಡೂಲ್ಕರ್ ಅವರು ಒಟ್ಟು 452 ಇನ್ನಿಂಗ್ಸ್ ಆಡಿ 49 ಶತಕ ಬಾರಿಸಿದ್ದಾರೆ. ಅತಿವೇಗವಾಗಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ ಕೀರ್ತಿ ವಿರಾಟ್ ಕೊಹ್ಲಿ ಅವರಿಗೆ ಸೇರಿತು

ವಿರಾಟ್ ಕೊಹ್ಲಿ (277 ಇನ್ನಿಂಗ್ಸ್) -49

ಸಚಿನ್ ತೆಂಡೂಲ್ಕರ್ (452) -49

ರೋಹಿತ್ ಶರ್ಮಾ (251) -31

ರಿಕಿ ಪಾಂಟಿಂಗ್ (365) -30

ಸನತ್ ಜಯಸೂರ್ಯ (433) -28.

ಇನ್ನು ಈ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿದೆ. ವಿರಾಟ್ ಕೊಹ್ಲಿ (101) ಹಾಗೂ ಶ್ರೇಯಸ್ ಅಯ್ಯರ್ 77 ಅವರ ಸೊಗಸಾದ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಉತ್ತರ ರನ್‌ ಕಲೆ ಹಾಕಲು ಕಾರಣವಾಯಿತು.

ಸ್ಪೋಟಕ ಆಟಕ್ಕೆ ಕೈ ಹಾಕಿದ ನಾಯಕ ರೋಹಿತ್ ಶರ್ಮಾ 40 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 23, ಕೆ.ಎಲ್ ರಾಹುಲ್ 8, ಸೂರ್ಯಕುಮಾರ್ ಯಾದವ್ 22 ಹಾಗೂ ರವೀಂದ್ರ ಜಡೇಜಾ 29 ರನ್ ಗಳಿಸಿದರು.

121 ಬೌಲ್ ಆಡಿ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಒಟ್ಟು 49 ಶತಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

Related Articles

Back to top button
error: Content is protected !!