ಶಿಕ್ಷಣ
ಜಗತ್ತಿಗೆ ನೀವೇ ಜ್ಯೋತಿ……

Views: 10
ಬದಲಾವಣೆ ಎಂಬುವುದು ಮಾನವನ ಸಹಜ ಗುಣ. ಅದನ್ನು ಮನಗಾಣಿಸಿ ಕೊಂಡು ಕೇವಲ ಮಾತಿಗೆ ಈ ಸಂದೇಶ ಸೀಮಿತವಾಗದೇ ಕೆಲಸದ ಮೂಲಕ ಸಾಭೀತುಪಡಿಸಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾದ್ಯ.
ಯಾವುದೇ ಸಾಧನೆ ಮಾಡಲು ಸಹನೆ ಅತೀ ಅಗತ್ಯ. ಸಹನೆಯೊಂದಿದ್ದರೆ. ಜಗತ್ತನ್ನೇ ಗೆಲ್ಲಬಹುದು.
ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಯಾವುದೇ ಕೆಲಸಕ್ಕೆ ಇನ್ನೊಬ್ಬರನ್ನು ಅವಲಂಭಿಸಬಾರದು.
ಪ್ರೀತಿಗಿಂತ ದೊಡ್ಡದಾದುದು ಈ ಜಗತ್ತಿನಲ್ಲಿ ಬೇರೇನು ಇಲ್ಲ. ಈ ಜಗತ್ತು ನಿಂತಿರುವುದು ಪ್ರೀತಿ. ವಿಶ್ವಾಸ ಮತ್ತು ನಂಬಿಕೆಗಳ ಮೇಲೆ. ಆದ್ದರಿಂದ ನಿಮ್ಮ ಮಕ್ಕಳ ಮೇಲೆ ನಿಮಗೆ ನಂಬಿಕೆ ಇರಲಿ, ವಾತ್ಸಲ್ಯವಿರಲಿ, ಅವರಲ್ಲಿನ ಮುಗ್ದತನವನ್ನು ಸ್ವಾಥ೯ಕ್ಕಾಗಿ ಕದಡಬೇಡಿ, ಅವರು ದೇಶದ ಮಕ್ಕಳು ಭವಿಷ್ಯದ ಪ್ರಜೆಗಳು, ಯಾವುದೇ ವಿಷಯಕ್ಕೂ ಅವರ ಮೇಲೆ ಒತ್ತಡವನ್ನು ಹಾಕಬಾರದು. ಯಾಕೆಂದರೆ ಅವರು ತುಂಬುವ ಹಡುಗುಗಳಲ್ಲ, ಬೆಳಗಬೇಕಾದ ದೀಪಗಳು. ಸಮಾಜದ ಮುಂದಿನ ಭವಿಷ್ಯ ನಿಧ೯ರಿಸುವುದು ಇಂದಿನ ಮಕ್ಕಳಿಂದ.
*ಭಗವಂತನ ಸಾಕ್ಷಾತ್ಕಾರ….*. ಬೇರೆಯವರನ್ನು ನಂಬಿ ನಾವು ಮೋಸ ಹೋಗುವುದು, ನಿರಾಶೆಗೆ ಒಳಗಾಗುವುದು ಜಾಸ್ತಿ.
ಜನರನ್ನು ನಂಬಿ ಮೋಸ ಹೋಗಃವ ಬದಲು ದೇವರನ್ನು ನಂಬುವುದು ಒಳಿತು, ಎಕೆಂದರೆ ಜಗತ್ತಿನಲ್ಲಿ ನಮ್ಮನ್ನು ನಿರಾಸೆಗೊಳಿಸದ, ನಮಗೆ ಮೊಸ ಮಾಡದ ವ್ಯಕ್ತಿ ಇದ್ದರೆ ಅದು ದೇವರು ಮಾತ್ರ.
ಹುಟ್ಟಿನಿಂದ ಸಾವಿನವರೆಗೂ ನಾವು ಇನ್ನೊಬ್ಬರ ಸಹಾಯ, ಸ್ನೇಹವಿಲ್ಲದೇ ಬದುಕಲು ಸಾಧ್ಯವಿಲ್ಲ, ಇಷ್ಟಕ್ಕೂ ಈ ಜಗತ್ತಿನಲ್ಲಿ ನಮ್ಮದೆಂದು ಹೇಳಿಕೊಳ್ಳಲು ಏನೂ ಇಲ್ಲ, ಸತ್ತ ಮೇಲೆ ಎಲ್ಲವೂ ಇಲ್ಲಿಯೇ ಬಿಟ್ಟು ಬರಿಗೈಲಿ ದಾಸನಾಗಿ ಹೋಗುವವರು ನಾವು. ಬದುಕಿದಷ್ಟು ದಿನ ಅನಾವಶ್ಯಕವಾಗಿ ಅತಿಯಾದ ಸಂಪತ್ತನ್ನು ಕೂಡಿಡುವ ವ್ಯಾಮೋಹ, ಸಂಪತ್ತನ್ನು ಕೂಡಿಡುವುದು ತಪ್ಪಲ್ಲ ಆದರೆ ಅದರ ಸದುಪಯೋಗ ಆಗದಿದ್ದರೆ ನಿಜವಾಗಿಯೂ ಅದು ಒಂದು ಪ್ರಮಾದವೇ ಸರಿ. ಜಗತ್ತಿನಲ್ಲಿ ಎಷ್ಟೊ ಜನ ನಿಗ೯ತಿಕರು, ಅಸಾಯಕರು ಸಹಾಯ ಹಸ್ತಕ್ಕೆ ಅಂಗಲಾಚುತ್ತಿರುತ್ತಾರೆ, ಅಂಥವರ ಕೂಗಿಗೆ ಧ್ವನಿಯಾಗಿ, ಅವರ ಕಣ್ಣೀರು ಒರೆಸುವ ಕೈಗಳು ನೀವಾದರೇ, ನಿಮ್ಮ ಬದುಕು ಸಾಥ೯ಕ
ಸುಧಾಕರ ವಕ್ವಾಡಿ