ಶಿಕ್ಷಣ

ಗುರುಕುಲ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಹಬ್ಬದ ಸಂಭ್ರಮ: ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಭರ್ಜರಿ ನೃತ್ಯದ ಮೂಲಕ ರಂಜಿಸಿದ ರವಿಯಣ್ಣ

ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿಯೇ ಮುಂದುವರಿಯಬೇಕು ಪೋಷಕರು ಮಕ್ಕಳಿಗೆ ಅದೇ ಮಾಡಿ ಇದೇ ಮಾಡಿ ಎಂದು ಒತ್ತಡ ಹೇರಬಾರದು----  ರವಿಯಣ್ಣ

Views: 32

ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ‘ಗುರುಕುಲ ಕಾರ್ನಿವಲ್ ಮಕ್ಕಳ ಹಬ್ಬ’ ಸೋಮವಾರ ಅದ್ದೂರಿ ಸಂಭ್ರಮದಿಂದ ನಡೆಯಿತು.

ಸು-ಫ್ರಮ್- ಸೋ’ ಚಿತ್ರದ ಮೂಲಕ ರವಿಯಣ್ಣ ಎಂದೇ ಪ್ರಸಿದ್ಧಿ ಪಡೆದ, ನಟ ಗೌತಮ್ ಶನೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ‘ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿಯೇ ಮುಂದುವರಿಯಬೇಕು. ಪೋಷಕರು ಮಕ್ಕಳಿಗೆ ಅದೇ ಮಾಡಿ ಇದೇ ಮಾಡಿ ಎಂದು ಒತ್ತಡ ಹೇರಬಾರದು’ ಎಂದು ರವಿಯಣ್ಣ ಕಿವಿಮಾತು ಹೇಳಿದರು.

ಫ್ರಮ್- ಸೋ’ ಚಿತ್ರದ ನಟ ರವಿಯಣ್ಣ ಮಕ್ಕಳ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದರು.ಚೆಂಡೆವಾದನ ಮೋಜು ಮೋಜಿನ ಮುಖವಾಡ ನೃತ್ಯ ತಂಡದೊಂದಿಗೆ ವೇದಿಕೆಗೆ ಬರುವಾಗ ರವಿಯಣ್ಣನಿಗೆ ಮಕ್ಕಳಿಂದ ಭಾರೀ ಕರತಾಡನದ ಸ್ವಾಗತ ದೊರೆಯಿತು. ಚಿತ್ರದ ಹಾಡಿಗೆ ಮಕ್ಕಳು, ಶಿಕ್ಷಕರೊಂದಿಗೆ ವೇದಿಕೆಯಲ್ಲಿಯೇ ಕುಣಿದು ಕುಪ್ಪಳಿಸಿದರು. ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.

ಶಾಲಾ ಆವರಣದಲ್ಲಿ ವೈವಿಧ್ಯಮಯ ಮಳಿಗೆ

ಮಕ್ಕಳಿಗೆ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಸಲುವಾಗಿ ಮಕ್ಕಳು, ಪೋಷಕರ ಸಹಿತ 50 ಕ್ಕೂ ಮಿಕ್ಕಿ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿತ್ತು. ಮಕ್ಕಳು, ಪೋಷಕರೇ ವರ್ತಕರಾಗಿದ್ದು, ತಂಪು ಪಾನೀಯ, ತಿಂಡಿ – ತಿನಸು, ಬಟ್ಟೆ ಪುಸ್ತಕ, ಫ್ಯಾನ್ಸಿ ವಸ್ತುಗಳು, ಪೈಂಟಿಂಗ್, ಫಾಸ್ಟ್ ಫುಡ್ ಮಳಿಗೆಗಳು ಕ್ಯಾಂಪಸ್ ನಲ್ಲಿ ಗಮನಸೆಳೆದವು. ಮಕ್ಕಳು ಪೋಷಕರಿಂದ ಭರ್ಜರಿ ವ್ಯಾಪಾರ ನಡೆಯಿತು. 

ಚಿಣ್ಣರ ಪ್ರಿನ್ಸ್- ಪ್ರಿನ್ಸಸ್ ಸ್ಪರ್ಧೆ

3 ರಿಂದ 5 ವರ್ಷದ ಪುಟಾಣಿಗಳಿಗೆ ನಡೆದ ಪ್ರಿನ್ಸ್ ಪ್ರಿನ್ಸಸ್ (ರಾಜ-ರಾಣಿ) ಸ್ಪರ್ಧೆಯು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು. ಚಿಣ್ಣರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಗಾಳಿಪಟ ಉತ್ಸವದಲ್ಲಿ ಚಿಣ್ಣರು ಪಾಲ್ಗೊಂಡು ಖುಷಿಪಟ್ಟರು.

ಸತತ 216 ಗಂಟೆಗಳ ಕಾಲ ನೃತ್ಯ ಪ್ರದರ್ಶನದ ಮೂಲಕ ಗೋಲ್ಡನ್ ಬುಕ್ ಆಫ್ ವಿಶ್ವದಾಖಲೆಗೆ ಪಾತ್ರರಾದ ವಿದುಷಿ ದೀಕ್ಷಾ ಅವರಿಂದ ನಾಟ್ಯ ಪ್ರದರ್ಶನ, ಪ್ರಸಿದ್ಧ ಜಾದೂಗಾರ ಕುದ್ರೋಳಿಯ ಗಣೇಶ್ ಅವರಿಂದ ಜಾದೂ ಪ್ರದರ್ಶನ, ಮಕ್ಕಳು, ಶಿಕ್ಷಕ ವೃಂದದವರಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರನ್ನು ರಂಜಿಸಿತು.

ವೇದಿಕೆಯಲ್ಲಿ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಅನುಪಮಾ ಎಸ್. ಶೆಟ್ಟಿ ಪ್ರಾಂಶುಪಾಲೆ ಡಾ। ರೂಪಾ ಶೆಣೈ ಉಪಸ್ಥಿತರಿದ್ದರು.  

ಅನುರಾಧ ಪ್ರಾರ್ಥಿಸಿದರು. ಪ್ರಾಂಶುಪಾಲೆ ಡಾ। ರೂಪಾ ಶೆಣೈ  ಸ್ವಾಗತಿಸಿದರು. ಸಂಧ್ಯಾ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ವಂದಿಸಿದರು.

 

.

Related Articles

Back to top button
error: Content is protected !!