ರಾಜಕೀಯ

ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಗೀತಾ ಶಿವರಾಜ್ ಕುಮಾರ್

Views: 81

ಕನ್ನಡ ಕರಾವಳಿ ಸುದ್ದಿ: ಇನ್ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಘೋಷಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಇನ್ನೂ ಶಿವಮೊಗ್ಗದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಚುನಾವಣೆಗೆ ಸ್ಪರ್ಧಿಸದೇ ಇದ್ದರೂ ಕೂಡ ಪಕ್ಷ ಸಂಘಟನೆಯಲ್ಲಿ ಜೊತೆಗೆ ಇರುತ್ತೇನೆ. ನಿಮ್ಮೊಂದಿಗೆ ಕೆಲಸ ಮಾಡುವೆ. ಯಾವಾಗ ಕರೆದರೂ ಬರುತ್ತೇನೆ ಎಂದಿದ್ದಾರೆ.

ಶ್ವೇತಾ ಬಂಡಿ ಅವರು ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಇಂತವರಿಗೆ ಈ ಹುದ್ದೆಯನ್ನು ನೀಡಿದ್ದು ಹರ್ಷ ತಂದಿದೆ. ನನ್ನ ಚುನಾವಣಾ ಪ್ರಚಾರದಲ್ಲೂ ಶ್ರಮಿಸಿದ್ದರು. ಅವರಿಗೆ ಅಭಿನಂದನೆಗಳು ಎಂದು ಹೇಳುವ ಮೂಲಕ ಗೀತಾ ಶಿವರಾಜ ಕುಮಾರ ಅವರು ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದಾರೆ.

Related Articles

Back to top button