ಸಾಂಸ್ಕೃತಿಕ

ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ ನಿಧನ

Views: 182

ಕನ್ನಡ ಕರಾವಳಿ ಸುದ್ದಿ: ಭಾರತದ ಸಿನಿ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ನಟಿ ಬಿ.ಸರೋಜಾದೇವಿ ನಿಧನರಾದರು.

ಚರ್ತುಭಾಷಾ ನಟಿ ಎಂದೇ ಖ್ಯಾತರಾಗಿರುವ ಸರೋಜಾ ದೇವಿ ಬೈರಪ್ಪ ಗೌಡ- ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಬೆಂಗಳೂರಿನಲ್ಲಿ ಸರೋಜಾದೇವಿ ಮಗಳಾಗಿ ಜನಿಸಿದ್ದರು. ತಂದೆ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರೋಜಾ ದೇವಿ ಬೈರಪ್ಪ ದಂಪತಿಗೆ ನಾಲ್ಕನೇ ಮಗಳಾಗಿದ್ದರು.

ಸರೋಜಾ ದೇವಿಯನ್ನು ಅವರನ್ನು ತಾತ ದತ್ತು ನೀಡಲು ಮುಂದಾಗಿದ್ದರು. ಆದ್ರೆ ತಂದೆ ಬೈರಪ್ಪ ಅವ್ರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಸರೋಜಾ ದೇವಿಗೆ ಡ್ಯಾನ್ಸ್ ಕಲಿಯೋದಕ್ಕೆ ಉತ್ತೇಜಿಸಿದ್ದರು. ನಟನೆಯನ್ನು ವೃತ್ತಿಯಾಗಿಸಿಕೊಳ್ಳಲು ಸಪೋರ್ಟ್ ಮಾಡಿದ್ದು ತಂದೆಯರು. ತಾಯಿ ರುದ್ರಮ್ಮ ಸಿನಿಮಾದಲ್ಲಿ ಸ್ವಿಮ್ಮಿಂಗ್ ಸೂಟ್ ಮತ್ತು ಸ್ಲೀವ್ ಲೇಸ್ ಧರಿಸಿದಂತೆ ತಾಕೀತು ಮಾಡಿದ್ದರು. ತಾಯಿಯ ಮಾತನ್ನು ಪಾಲಿಸಿದ ಸರೋಜಾ ದೇವಿ ಯಾವತ್ತೂ ಸಿನಿಮಾದಲ್ಲಿ ಅಂತಾ ಡ್ರೇಸ್ಗಳನ್ನ ಹಾಕಿರಲಿಲ್ಲ.

13ನೇ ವಯಸ್ಸಿನಲ್ಲೇ ಸರೋಜಾ ದೇವಿಗೆ ಸಿನಿಮಾ ಆಫರ್ ಬಂದಿತ್ತು. ಬಿ.ಆರ್.ಕೃಷ್ಣಮೂರ್ತಿ ಮೊದಲು ದೇವಿಯನ್ನು ಹಾಡು ಹೇಳುವಾಗ ನೋಡಿದ್ದರು. ನಂತರ ಅವೇ ಮೊದಲು ಸಿನಿಮಾ ಆಫರ್ ಮಾಡಿದ್ದರು. ಆದ್ರೆ ಸರೋಜಾ ದೇವಿ ಸಿನಿಮಾ ಆಫರ್ ಅನ್ನು ತಿರಸ್ಕರಿಸಿದ್ದರು. ನಂತರದ ದಿನಗಳಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ನಟನೆ ಮಾಡಿದರು. 60 ವರ್ಷದಲ್ಲಿ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಮೂಲಕ ಸ್ಯಾಂಡಲ್ವುಡ್ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡರು.

ಸ್ಯಾಂಡಲ್ವುಡ್ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡಿದ್ದರೆ, ಕಾಲಿವುಡ್ನಲ್ಲಿ ಕನ್ನಡದ ಗಿಳಿ ಎಂದು ಬಿರುದು ಬಂದಿತ್ತು. 1955ರಲ್ಲಿ ತನ್ನ 17ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ‘ಮಹಾಕವಿ ಕಾಳಿದಾಸ’ ಸರೋಜಾ ದೇವಿ ಅಭಿನಯದ ಮೊದಲ ಚಿತ್ರವಾಗಿದೆ. 1958ರಲ್ಲಿ ತಮಿಳಿನಲ್ಲಿ ಬಹುಬೇಡಿಕೆ ನಟಿಯಾಗಿದರು. ಅವರಿಗೆ ‘ನಾಡೋಡಿ ಮಾನಾನ್’ ಸಿನಿಮಾ ತಮಿಳಿನಲ್ಲಿ ಸಕ್ಸಸ್ ತಂದುಕೊಟ್ಟ ಸಿನಿಮಾ. 1959ರಲ್ಲಿ ‘ಪಾಂಡುರಂಗ ಮಾಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

1970ವರೆಗೂ ತೆಲಗು ಇಂಡಸ್ಟ್ರೀಯಲ್ಲಿ ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕವೂ 1974ರವೆಗೂ ತಮಿಳಿನಲ್ಲಿ ಬೇಡಿಕೆ ನಟಿಯಾಗಿದ್ದರು. 1980ರವೆಗೂ ಕನ್ನಡ ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ, 1959ರಿಂದ ಬಾಲಿವುಡ್ನಲ್ಲೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ಲೀಡ್ ರೋಲ್ನಲ್ಲಿ ನಟಿಸಿರೋ ಅಭಿನಯ ಸರಸ್ವತಿಯಾಗಿದ್ದರು.

 

 

Related Articles

Back to top button
error: Content is protected !!