ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ನಟಿ ರನ್ಯಾರಾವ್ ಪರಪ್ಪನ ಅಗ್ರಹಾರ ಜೈಲುಪಾಲು!

Views: 39
ಕನ್ನಡ ಕರಾವಳಿ ಸುದ್ದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಡಿಆರ್ ಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ನಟಿ ರನ್ಯಾ ರಾವ್ ಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.
ಡಿಆರ್ ಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ನಟಿ ರನ್ಯಾ ರಾವ್ ಕಸ್ಟಡಿ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಡಿಆರ್ ಐ ಅಧಿಕಾರಿಗಳು ಮತ್ತೆ ಕಸ್ಟಡಿಗೆ ನೀಡುವಂತೆ ಕೇಳಿದ್ದಾರೆ. ಆದರೆ ಕೋರ್ಟ್ ರನ್ಯಾ ರಾವ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.
15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ನಟಿ ರನ್ಯಾರಾವ್ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.
ಪತಿಯ ಕೈವಾಡ ಇದೆಯಾ? ತನಿಖೆ
ಮಾಧ್ಯಮಗಳು ಈಗಾಗಲೇ ವರದಿ ಮಾಡಿರುವ ಪ್ರಕಾರ, ರನ್ಯಾ ರಾವ್ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಉತ್ತರ ಕರ್ನಾಟಕದ ಪ್ರಮುಖ ರಾಜಕೀಯ ಕುಟುಂಬದ ಹುಡುಗನೊಂದಿಗೆ ವಿವಾಹವಾಗಿದ್ದರು ಎನ್ನಲಾಗಿದೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಈಕೆಯ ಪತಿ ಜತಿನ್ ಜನಪ್ರಿಯ ಆರ್ಕಿಟೆಕ್ಟ್ ಅನ್ನೋದು ತಿಳಿದು ಬಂದಿದೆ. ಆದರೆ, ಈ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಪತಿಯ ಕೈವಾಡ ಏನಾದರೂ ಇದೆಯೇ ಎಂಬುವುದು ಕೂಡ ತನಿಖೆ ನಡೆಯುತ್ತಿದೆ. ಸದ್ಯಕ್ಕಿನ್ನು ಈ ಮಾಹಿತಿಯನ್ನು ಡಿಆರ್‌ಐ ಬಿಡಯಗಡೆ ಮಾಡಿಲ್ಲ.