ಗುರುಕುಲ ಶಾಲೆಯ ಪುಷ್ಪ ವಾಟಿಕಾದಲ್ಲಿ ಹಳದಿ ದಿನಾಚರಣೆ

Views: 36
ಕನ್ನಡ ಕರಾವಳಿ ಸುದ್ದಿ: ಗುರುಕುಲ ಶಾಲೆಯ ಕಿಂಡರ್‌ಗಾರ್ಟನ್ ವಿಭಾಗದಲ್ಲಿ ಜುಲೈ 11ರಂದು ಹಳದಿ ದಿನಾಚರಣೆ ಸ್ನೇಹದ ವಿಷಯದೊಂದಿಗೆ ವಿಜೃಂಭಣೆಯಿಂದ ಜರುಗಿತು. ಮಕ್ಕಳಿಗೆ ಹಳದಿ ಬಣ್ಣದ ಮಹತ್ವ ಮತ್ತು ಸ್ನೇಹದ ಮೌಲ್ಯವನ್ನು ಪರಿಚಯಿಸುವ ಉದ್ದೇಶದಿಂದ ಈ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು ಹಳದಿ ಉಡುಪು ಧರಿಸಿ, ಸ್ನೇಹದ ಕಾರ್ಡ್‌ಗಳು ಹಾಗೂ ಹೂವಿನ ಅಲಂಕಾರಗಳೊಂದಿಗೆ ಉತ್ಸಾಹದಿಂದ ಭಾಗವಹಿಸಿದರು. ಸ್ನೇಹದ ಕುರಿತ ಹಾಡುಗಳು, ಕಥೆಗಳು ಮತ್ತು ಚಟುವಟಿಕೆಗಳು ಮಕ್ಕಳ ಮನೋರಂಜನೆಗೆ ಕಾರಣವಾದವು.
ಪ್ರಾಂಶುಪಾಲರಾದ ಡಾ. ರೂಪಾ ಶೆಣೈ, ಹಳದಿ ದಿನದ ಮಹತ್ವವನ್ನು ಪುಟಾಣಿಗಳಿಗೆ ತಿಳಿಸುತ್ತಾ “ನೀವು ಪರಸ್ಪರ ಸ್ನೇಹದಿಂದ ಬೆಳೆದು, ಉತ್ತಮ ಗುಣಗಳನ್ನು ಅಭಿವೃದ್ದಿಪಡಿಸಿಕೊಳ್ಳಿ” ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ಮಾತನಾಡುತ್ತಾ, “ನೀವು ಎಲ್ಲರೊಂದಿಗೆ ಹೃದಯಪೂರ್ವಕ ಸ್ನೇಹ ಬೆಳೆಸಿದರೆ, ಶಾಲೆಯೇ ಮನೆಯಂತಾಗುತ್ತದೆ. ಸ್ನೇಹವೇ ಮೊದಲ ಪಾಠ” ಎಂದು ತಿಳಿಸಿದರು.
ಮುದ್ದಾದ ಉಡುಗೊರೆಗಳೊಂದಿಗೆ ಕಾರ್ಯಕ್ರಮದ ಸಮಾಪನವಾಗಿದ್ದು, ಮಕ್ಕಳು ತಮ್ಮ ಸ್ನೇಹಿತರ ಜೊತೆ ಸಂತೋಷದಿಂದ ಸಮಯ ಕಳೆಯುವ ಮೂಲಕ ಹಳದಿ ದಿನವನ್ನು ಸ್ಮರಣೀಯವನ್ನಾಗಿ ಮಾಡಿಕೊಂಡರು.
ಕಾರ್ಯಕ್ರಮಕ್ಕೆ ಶಿಕ್ಷಕಿಯರು ಹಾಗೂ ಪುಟಾಣಿ ಮಕ್ಕಳು ಸಾಕ್ಷಿಯಾದರು.ನಿರೂಪಣೆಯನ್ನು ಸಹಶಿಕ್ಷಕಿ ಶ್ರೀಮತಿ ರೇಣುಕಾ ಮಾಡಿದರು.