ಸಾಂಸ್ಕೃತಿಕ

ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ರಸದೌತಣ ‘ಸು ಫ್ರಂ ಸೋ’ ಭಾವ ಬಂದರು ಹಾಡಿಗೆ ಸ್ಟೆಪ್..ಸಿಕ್ಕಾಪಟ್ಟೆ ವೈರಲ್!

Views: 123

ಕನ್ನಡ ಕರಾವಳಿ ಸುದ್ದಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ  ಸು ಫ್ರಂ ಸೋ ಚಿತ್ರದ ಭಾವ ಬಂದರು ಹಾಡಿನ ಮನರಂಜನಾ ರಸದೌತಣ ನೀಡಿದ ತಂಡದ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ

ಕಟಪಾಡಿ ಸಾರ್ವಜನಿಕ ಗಣೇಶೋತ್ಸವದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸು ಫ್ರಂ ಸೋ ಪಾತ್ರಧಾರಿಗಳು ದಿಢೀರ್ ಅಂತ ಪ್ರತ್ಯಕ್ಷರಾಗಿದ್ದಾರೆ. ಭಾವ, ಗುರೂಜಿ, ಸುಲೋಚನಾಳನ್ನು ಕಂಡು ಜನ ಬೆರಗಾಗಿದ್ದಾರೆ. ಭಾವ ತೂರಾಡುತ್ತಿದ್ದರೆ, ಗುರೂಜಿ ಆಶೀರ್ವಾದ ಮಾಡುತ್ತಿದ್ದಾರೆ. ಬೈಕ್ ಏರಿ ಬಂದ ಸುಲೋಚನಾಸಂಗಮ ಫ್ರೆಂಡ್ಸ್ ತಂಡದ ಜಯಕ‌ರ್ ಕುಂದ‌ರ್ ನೇತೃತ್ವದ ತಂಡದಲ್ಲಿ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದ ಸು ಫ್ರಂ ಸೋ ಚಿತ್ರದಲ್ಲಿ ಕಾಣಿಸಿಕೊಂಡ ಭಾವ, ಗುರೂಜಿ, ಸುಲೋಚನಾ ಪಾತ್ರಗಳ ವೇಷ ಹಾಕಿ ಮೆರವಣಿಗೆ ಉದ್ದಕ್ಕೂ ಸಾರ್ವಜನಿಕರನ್ನು ರಂಜಿಸಿದ್ದಾರೆ. ಪ್ರತಿ ಗಣೇಶೋತ್ಸವ ಸಂದರ್ಭ ವಿಶೇಷ ವೇಷಗಳನ್ನು ಹಾಕಿ ಜನರ ಗಮನ ಸೆಳೆಯುತ್ತಿದೆ ಈ ತಂಡ.ಜಯಕ‌ರ್ ಕುಂದ‌ರ್ ಕಟಪಾಡಿಯಲಿ ರಿಕ್ಷಾ ಚಾಲಕರಾಗಿದ್ದು ಧಾರ್ಮಿಕ ಮತ್ತು ಸಾಮಾಜಿಕ ಜೊತೆಗೆ ಚಲನಚಿತ್ರ ನಟರಾಗಿ ಪ್ರಸಿದ್ಧಿ ಪಡೆದವರು. ಇದೀಗ ಸು ಫ್ರಂ ಸೋ ಪಾತ್ರಗಳ ಮೂಲಕ ಜನರಿಗೆ ಮನರಂಜನಾ ರಸದೌತಣ ನೀಡಿದ್ದಾರೆ.

 

Related Articles

Back to top button