ಸಾಮಾಜಿಕ

ಗಂಡನ ವರದಕ್ಷಿಣೆ ಕಿರುಕುಳ..ಜೊತೆಗೆ ಅಸಭ್ಯ ಬೇಡಿಕೆ ಇಟ್ಟ ಮಾವನ ವಿರುದ್ಧವೇ ಸೊಸೆ ದೂರು

Views: 133

ಕನ್ನಡ ಕರಾವಳಿ ಸುದ್ದಿ: ಸೊಸೆಯನ್ನು ಮಗಳಂತೆ ನೋಡಬೇಕಾದ ಮಾವನೇ ಮಂಚಕ್ಕೆ ಕರೆದಿರುವ ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ.

ನಿವೃತ್ತ ಡಿವೈಎಸ್ಪಿಯವರ ಪುತ್ರಿ ಅನಿತಾ ಎಂಬವವರು ತನ್ನ ಅತ್ತೆ ಮನೆಯಲ್ಲಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅನಿತಾ ಅವರು ಗಂಡ ಡಾ.ಗೋವರ್ಧನ್ ಮತ್ತು ಮಾವ ಪ್ರೊಫೆಸರ್ ನಾಗರಾಜು ವಿರುದ್ಧ ವರದಕ್ಷಿಣೆ ಕಿರುಕುಳ, ಅಶ್ಲೀಲ ಹೇಳಿಕೆಗಳು ಮತ್ತು ದೈಹಿಕ ದೌರ್ಜನ್ಯದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನವೆಂಬರ್ 2, 2023 ರಂದು ಅನಿತಾ ಅವರು ಗೋವರ್ಧನ್ ಎಂಬುವವರನ್ನು ಮದುವೆಯಾಗಿದ್ದಾರೆ. ಭಾರೀ ಅದ್ದೂರಿಯಲ್ಲಿ ಮದುವೆ ಮಾಡಲಾಯಿತು. ಅನಿತಾ ಅವರ ತಂದೆ ಮದುವೆಗಾಗಿ ಚಿನ್ನ, ಬೆಳ್ಳಿ ಮತ್ತು ಇತರ ಖರ್ಚುಗಳಿಗಾಗಿ ಸುಮಾರು 25 ಲಕ್ಷ ರು. ಖರ್ಚು ಮಾಡಿದ್ದಾರೆ. ಮದುವೆಯಾದ ಕೇವಲ 15 ದಿನಗಳ ನಂತರ ಪತಿಯ ಕಿರುಕುಳ ಶುರುವಾಗಿದೆ. ಗೋವರ್ಧನ್ ಅನಿತಾ ಅವರ ತಂದೆಯ ಆಸ್ತಿ ಮತ್ತು ಬಾಡಿಗೆ ಆದಾಯದಲ್ಲಿ ಪಾಲು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಅನಿತಾ ಆರೋಪಿಸಿದ್ದಾರೆ.

ಮಾವನ ಲೈಂಗಿಕ ಬೇಡಿಕೆ: ಅನಿತಾ ಅವರು ಮಾವನ ಬಗ್ಗೆಯೂ ಗಂಭೀರ ಆರೋಪವನ್ನು ಮಾಡಿದ್ದಾರೆ. ಎಫ್‌ಐಆರ್ ಪ್ರಕಾರ, ಮಾವ ನಾಗರಾಜು ಅವರು ಅಶ್ಲೀಲವಾಗಿ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ. ಇದು ಮಾತ್ರವಲ್ಲದೆ ದೈಹಿಕವಾಗಿ ಕಿರುಕುಳ ನೀಡಿದ್ದಾರೆ.ನಿಮ್ಮ ಮದುವೆಯಾಗಿ ಕೆಲವು ತಿಂಗಳು ಕಳೆದಿವೆ. ಯಾಕೆ ಇನ್ನು ಮಕ್ಕಳು ಮಾಡಿಕೊಂಡಿಲ್ಲ, ಸರಿಯಾಗಿ ಸಂಸಾರ ಮಾಡುತ್ತಿಲ್ಲವೇ, ಇಲ್ಲದಿದ್ದರೆ, ನಾನು ಬರುತ್ತೇನೆ. ಮಾಡರ್ನ್ ಹುಡುಗಿಯಂತೆ ಅರ್ಧ ಬಟ್ಟೆ ಧರಿಸಿ ನನ್ನ ಮುಂದೆ ಬಾ ಎಂದು ಅಸಭ್ಯವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಗಂಡ ಹಾಗೂ ಅತ್ತೆ ಬಳಿ ಹೇಳಿದರೆ, ಇದು ಮನೆಯ ವಿಷಯ, ನೀನೇ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಗಂಡನ ಮನೆಯವರ ಆರ್ಥಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತ ಅನಿತಾ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪತಿ, ಮಾವ ಮತ್ತು ಅತ್ತೆಯ ವಿರುದ್ದ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!