ಜನಮನ
ಕೋಟೇಶ್ವರ: ಅಗ್ನಿಶಾಮಕ ದಳದವರಿಂದ ಆಕಸ್ಮಿಕ ಬೆಂಕಿ ದುರಂತ ಪ್ರಾತ್ಯಕ್ಷಿಕೆ

Views: 113
ಕನ್ನಡ ಕರಾವಳಿ ಸುದ್ದಿ: ಆಕಸ್ಮಿಕ ಬೆಂಕಿ ದುರಂತಗಳು ಸಂಭವಿಸಿದ ಸಂದರ್ಭಗಳಲ್ಲಿ ಬೆಂಕಿ ನಿರೋಧಕಗಳನ್ನು ಹೇಗೆ ಬಳಸಬೇಕು ಎನ್ನುವದನ್ನು ಪ್ರಾತ್ಯಕ್ಷಿಕೆ ಮೂಲಕ ಕೋಟೇಶ್ವರ ಕಂದಾವರ ಎಂಟರ್ಪ್ರೈಸಸ್ ಪೆಟ್ರೋಲ್ ಬಂಕ್ ಸಿಬ್ಬಂದಿಗಳಿಗೆ ತೋರಿಸಲಾಯಿತು.
ಅಲ್ಲಲ್ಲಿ ಅವಶ್ಯಕತೆ ಇರುವ ಎಲ್ಲ ಕಡೆ ಸಾಕಷ್ಟು ಬೆಂಕಿ ನಿರೋಧಕಗಳನ್ನು ಆಳವಡಿಸಲಾಗಿದೆ. ಅದನ್ನು ತುರ್ತು ಸಂದರ್ಭದಲ್ಲಿ ಉಪಯೊಗಿಸುವ ಕುರಿತು ಪ್ರಾತಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಕುಂದಾಪುರ ಅಗ್ನಿಶಾಮಕ ದಳದ ಪ್ರಮುಖರಾದ ಬಾಲಕೃಷ್ಣ, ಕೃಷ್ಣ ನಾಯಕ್ ಅಗತ್ಯ ಮಾಹಿತಿ ನೀಡಿದರು.ಅವರು ಈಗಾಗಲೇ ಶಾಲಾ ಕಾಲೇಜು, ಆಸ್ಪತ್ರೆ ಮುಂತಾದ ಕಡೆ ಪ್ರಾತ್ಯಕ್ಷಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ದಿನೇಶ್, ರಾಘವೇಂದ್ರ ಬೋವಿ ಬಸವರಾಜ್, ಮುಂತಾದವರು ಇದ್ದರು.


.






